Zubair Murder Case Detected: 5 Arrested

ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ಮುಕ್ಕಚೇರಿ ಮಸೀದಿ ಬಳಿಯಲ್ಲಿಯೇ ಝುಬೈರ್ ಎಂಬಾತನನ್ನು ಮಾರಕಾಯುಧಗಳಿಂದ ಕೊಲೆಗೈದ ಪ್ರಕರಣದಲ್ಲಿ ಭಾಗಿಯಾದ 5 ಆರೋಪಿಗಳನ್ನು ಬಂಧಿಸುವಲ್ಲಿ ಮಂಗಳೂರು ನಗರ ಪೊಲೀಸರು ಯಶಸ್ವಿಯಾಗಿರುತ್ತಾರೆ.

ಪ್ರಕರಣದ ವಿವರ

ದಿನಾಂಕ: 04-10-2017 ರಂದು ರಾತ್ರಿ 7-50 ಗಂಟೆ ಸುಮಾರಿಗೆ ಮಂಗಳೂರು ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ  ಉಳ್ಳಾಲ ಗ್ರಾಮದ ಮುಕ್ಕಚೇರಿ ಮಸೀದಿ ಎದುರುಗಡೆ 4-5 ಮಂದಿ ಮಾರಕಾಯುಧಗಳಿಂದ ಝುಬೈರ್ ಎಂಬವರನ್ನು ಕೊಲೆ ಮಾಡಿರುತ್ತಾರೆ.  ಆ ಸಮಯದಲ್ಲಿ ಝುಬೈರ್ ನ ಜೊತೆಯಲ್ಲಿದ್ದ ಇಲ್ಯಾಸ್ ಎಂಬವರ ಕೈಗಳಿಗೆ ಹಲ್ಲೆ ಮಾಡಿ ಗಾಯಗೊಳಿಸಿರುತ್ತಾರೆ. ಈ ಬಗ್ಗೆ ಝುಬೈರ್ ರವರ ಸಹೋದರ  ಅಸಿಫ್ ಎಂಬವರು ನೀಡಿದ ದೂರಿನಂತೆ ಉಳ್ಳಾಲ ಪೊಲೀಸ್ ಠಾಣಾ  ಅ.ಕ್ರ : 461/2017 ಕಲಂ: 143, 147, 148, 324, 326, 302, 120(ಬಿ) ಜೊತೆಗೆ 149 ಐಪಿಸಿ  ಮತ್ತು ಕಲಂ: 24, 25(1ಬಿ) ಶಸ್ತ್ರಾಸ್ತ್ರ ಕಾಯ್ದೆ ರಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.

ಈ ಕೊಲೆ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳ ಪತ್ತೆಯ ಬಗ್ಗೆ ನಾಲ್ಕು ವಿಶೇಷ ತಂಡಗಳನ್ನು  ರಚಿಸಲಾಗಿತ್ತು.

 1. ಶ್ರೀ ಗೋಪಿ ಕೃಷ್ಣ, ಪಿಐ ಉಳ್ಳಾಲ ಹಾಗೂ ರಾಜೇಂದ್ರ ಪಿಎಸ್ ಐ , ಉಳ್ಳಾಲ ಪೊಲೀಸ್ ಠಾಣೆ ಮತ್ತು ತಂಡ.
 2. ಶ್ರೀ ಸುಧಾಕರ್, ಪಿಎಸ್ ಐ ಮಂಗಳೂರು ಗ್ರಾಮಾಂತರ ಠಾಣೆ ಮತ್ತು ತಂಡ
 3. ಶ್ರೀ ಅಶೋಕ್ಪಿಐ, ಕೊಣಾಜೆ ಮತ್ತು ದಕ್ಷಿಣ ಉಪ ವಿಭಾಗದ ರೌಡಿ ನಿಗ್ರಹ ತಂಡ
 4. ಶ್ರೀ ವೆಲೆಂಟೈನ್ ಡಿಸೋಜಾ, .ಸಿ.ಪಿ, ಶ್ರೀ ಸುನೀಲ್ ನಾಯ್ಕ್ ಪಿ.ಐ ಮತ್ತು ಸಿಸಿಬಿ ಸಿಬ್ಬಂದಿಗಳ ತಂಡ

 ಕೊಲೆ ಕೃತ್ಯ ನಡೆಸಿದ ಆರೋಪಿಗಳು  ಆರೋಫಿಗಳ ಪೈಕಿ ನಿಝಮ್  @ ನಿಝಾಮುದ್ದೀನ್ ಎಂಬಾತನ ಕೆಎ-19-ಎಸಿ-0304  ಮಾರುತಿ ಸ್ವಿಪ್ಟ್ ಡಿಸೈರ್ ಕಾರಿನಲ್ಲಿ ಬೆಂಗಳೂರು ಕಡೆಗೆ ಪರಾರಿಯಾದ ಬಗ್ಗೆ ಮಾಹಿತಿ ಸಂಗ್ರಹಿಸಿ ಈ ಕೃತ್ಯದಲ್ಲಿ ಭಾಗಿಯಾದ

 1. ಸುಹೈಲ್ @ ಅಬ್ದುಲ್ ರಹಿಮಾನ್ ಸುಹೈಲ್( 23) ತಂದೆಹುಸೈನ್ , ವಾಸ:  17/63/14 , ಜಮಾಲಿಯ ರಸ್ತೆ, ಮುಕ್ಕಚೇರಿ,ಉಳ್ಳಾಲ ಗ್ರಾಮ, ಮಂಗಳೂರು ತಾಲೂಕು
 2. ನಿಜಾಮುದ್ದೀನ್ (23) ತಂದೆ: ಎಂ. ಶರೀಫ್, ವಾಸವಾಸ: ಚೆನ್ನಯೆರೆ ಗುಡ್ಡೆ, .ಟಿ.. ರಸ್ತೆ, ಅನಿಲ್ ಕಂಪೌಂಡ್, ಉಳ್ಳಾಲ ಗ್ರಾಮ, ಮಂಗಳೂರು ತಾಲೂಕು
 3. ಮಹಮ್ಮದ್ ಮುಸ್ತಾಪ (21) ತಂದೆ: ಅನ್ವರ್ ಹುಸೇನ್, ಉಚ್ಚಿಲ ಸಂಕೋಲಿಗೆ, ಸೊಮೇಶ್ವರ ಗ್ರಾಮ, ಮಂಗಳೂರು ತಾಲೂಕು
 4. ತಾಜುದ್ದೀನ್ @ ಹಸನ್ ತಾಜುದ್ದೀನ್ (24) ತಂದೆಕೆ. ಮೊಹಮ್ಮದ್, ವಾಸಡೋರ್ ನಂಬ್ರ:  18-19-30,  ಬೊಟ್ಟುಧರ್ಮ ನಗರಉಳ್ಳಾಲ ಗ್ರಾಮ, ಮಂಗಳೂರು ತಾಲೂಕು.
 5. ಅಸಿಪ್ @ ಮಂದ ಅಸಿಫ್, ಪ್ರಾಯ(40), ತಂದೆ: ಮೊಹಮ್ಮದ್, ವಾಸ: ಹೈದರಾಲಿ ರಸ್ತೆ, . ಎಂ ಟ್ರೇಡರ್ ಎದುರು, ಮುಕ್ಕಚೇರಿ, ಉಳ್ಳಾಲ, ಮಂಗಳೂರು.

   ಎಂಬವರನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

 ಆರೋಪಿಗಳ ಪೂರ್ವ ಚರಿತ್ರೆ

 ಆರೋಪಿ ಸುಹೈಲ್ @ ಅಬ್ದುಲ್ ರಹಿಮಾನ್ ಸುಹೈಲ್ ಎಂಬಾತನ ವಿರುದ್ದ ಒಟ್ಟು 4 ಪ್ರಕರಣಗಳು ದಾಖಲಾಗಿರುತ್ತದೆ.

 1. ಆರೋಪಿ ತಾಜುದ್ದೀನ್ @ ಹಸನ್ ತಾಜುದ್ದೀನ್ ವಿರುದ್ಧ ಮನೆಗೆ ಕಲ್ಲು ಬಿಸಾಡಿ ಹಾನಿಗೊಳಿಸಿದ ಬಗ್ಗೆ ಪ್ರಕರಣ ದಾಖಲಾಗಿರುತ್ತದೆ.
 2. ಆರೋಪಿ ಮೊಹಮ್ಮದ್ ಮುಸ್ತಾಫ ಎಂಬಾತನ ವಿರುದ್ಧ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣವೊಂದು ದಾಖಲಾಗಿರುತ್ತದೆ.

 

 1. ಆರೋಪಿ ನಿಝಾಮುದ್ದೀನ್ @ ನಿಝಮ್ ಎಂಬಾತನ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಹಲ್ಲೆ ಪ್ರಕರಣವೊಂದು ದಾಖಲಾಗಿರುತ್ತದೆ.
 2. ಆರೋಪಿ ಮಂದಾ ಅಸೀಫ್ @ ಅಸೀಫ್ ಎಂಬಾತನ ವಿರುದ್ಧ ಈಗಾಗಲೇ ಒಟ್ಟು 10 ಪ್ರಕರಣಗಳು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುತ್ತದೆ.

ಈ ಪ್ರಕರಣದಲ್ಲಿ ಇನ್ನೂ ಇತರ ಆರೋಪಿಗಳು ಭಾಗಿಯಾಗಿರುವ ಬಗ್ಗೆ ಮಾಹಿತಿಯಿದ್ದುಇವರ ಪತ್ತೆ ಕಾರ್ಯ ಮುಂದುವರಿದಿದೆ.

ಪೊಲೀಸ್ ಕಮೀಷನರ್ ಶ್ರೀ ಟಿ. ಆರ್ ಸುರೇಶ್ ರವರ ಆದೇಶದಂತೆ ಕಾನೂನು ಮತ್ತು ಸುವ್ಯವಸ್ಥೆಯ ಡಿ.ಸಿ.ಪಿ  ಶ್ರೀ. ಹನುಮಂತರಾಯ ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿ.ಸಿ.ಪಿ ಯವರಾದ   ಶ್ರೀಮತಿ ಉಮಾ ಪ್ರಶಾಂತ್ ಮಾರ್ಗದರ್ಶನದಲ್ಲಿ   ಎಸಿಪಿ ದಕ್ಷಿಣ ಉಪವಿಭಾಗ ಶ್ರೀ ರಾಮ್ ರಾವ್ ರವರ ನೇತ್ರತ್ವದಲ್ಲಿ ಈ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿರುತ್ತಾರೆ.

Leave a Reply

Your email address will not be published. Required fields are marked *