Mangalore City Police

Daily Crime Reports : November 17, 2017

Crime Reported in Bajpe Police Station

ದಿನಾಂಕ17-11-2017 ರಂದು ಬಜಪೆ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಟಿ.ಡಿ. ನಾಗರಾಜ್‌ರವರಿಗೆ ಮಂಗಳೂರು ತಾಲೂಕು ಮೊಗರು ಗ್ರಾಮದ ನಾರ್ಲ ಶಾನ್‌ ಬೆಟ್ಟು ಎಂಬಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕೆಲವು ಜನರು ಕೋಳಿ ಅಂಕ ಜುಗಾರಿ ಆಡುತ್ತಿರುವುದಾಗಿ ದೊರೆತ ಖಚಿತ ಮಾಹಿತಿಯಂತೆ ಠಾಣಾ ಸಿಬ್ಬಂದಿಗಳೊಂದಿಗೆ ಅಲ್ಲಿಗೆ ಹೋಗಿ ಮದ್ಯಾಹ್ನ ದಾಳಿ ನಡೆಸಿ ಜುಗಾರಿ ಆಟದಲ್ಲಿ ನಿರತರಾದ 6 ಮಂದಿಯನ್ನು ದಸ್ತಗಿರಿ ಮಾಡಿ ಹಾಗೂ ಜುಗಾರಿ ಆಟಕ್ಕೆ ಬಳಸಿದ 39 ವಿವಿಧ ಜಾತಿಯ ಹುಂಜಾ ಕೋಳಿಗಳನ್ನು ಹಾಗೂ ನಗದು ರೂ.2300/- ನ್ನು ಸ್ವಾಧೀನಪಡಿಸಿದ್ದಾಗಿದೆ

Crime Reported in Konaje Police Station

ಫಿರ್ಯಾದಿ Ravi Peeru Pawar  PSI(L&O) Konaje  ಠಾಣೆ ರವರು ದಿನಾಂಕ 17-11-2017  ರಂದು ಇಲಾಖಾ ವಾಹನದಲ್ಲಿ ಸಿಬ್ಬಂದಿಗಳೊಂದಿಗೆ ರೌಂಡ್ಸ್‌ ಕರ್ತವ್ಯದಲ್ಲಿರುವಾಗ ಬೆಳಿಗ್ಗೆ ಸುಮಾರು 10:30 ಗಂಟೆಗೆ ಬಂಟ್ವಾಳ ತಾಲೂಕು ನರಿಂಗಾನ ಗ್ರಾಮದ ತೌಡುಗೋಳಿ ಕ್ರಾಸ್ ಎಂಬಲ್ಲಿ ಆರೋಪಿ  ನರಿಂಗಾನ ನಿವಾಸಿ  Mahammed Safaz ನು  ಮಾದಕ ವಸ್ತು ಗಾಂಜಾ ಸೇವನೆ ಮಾಡುತ್ತಿರುವ ಬಗ್ಗೆ ದೊರೆತ ಖಚಿತ ಮಾಹಿತಿಯಂತೆ ಗಾಂಜಾ ಸೇವನೆ ಮಾಡುತ್ತಿದ್ದ ಆರೋಪಿಯನ್ನು ಹಿಡಿದು ವಿಚಾರಿಸಿದಲ್ಲಿ ಮಹಮ್ಮದ್ ಸಫಾಝ್ ನು ಗಾಂಜಾ ಸೇವನೆ ಮಾಡುತ್ತಿರುವುದಾಗಿ ತಪ್ಪೊಪ್ಪಿಕೊಂಡಿದ್ದು, ವೈದ್ಯಕೀಯ ಪರೀಕ್ಷೆ ಯಿಂದ ದೃಡ ಪಟ್ಟಂತೆ ಆತನ ವಿರುದ್ದ ಪ್ರಕರಣ ದಾಖಲಿಸಿರುವುದು ಎಂಬಿತ್ಯಾದಿ

Crime Reported in Moodabidre Police Station

ಪಿರ್ಯಾದಿ Sadashiva Acharya ರವರು  ಮಂಗಳೂರು ತಾಲೂಕು ಕರಿಂಜೆ ಗ್ರಾಮದ ಕಲ್ಲಬೆಟ್ಟು ಎಂಬಲ್ಲಿ ಮೋಹನದಾಸ್ ಪ್ರಭು ಎಂಬುವರ ಬಾಡಿಗೆ ಮನೆಯಲ್ಲಿ ವಾಸವಾಗಿದ್ದು ದಿನಾಂಕ:5-9-2017 ರಂದು ಬೆಳಿಗ್ಗೆ 10:00 ಗಂಟೆ ಸಮಯಕ್ಕೆ ಮನೆಯ ಬಾಗಿಲಿಗೆ ಬೀಗ ಹಾಕಿ ಬೀಡಿ ಬ್ರಾಂಚ್ ಗೆ ಪಿರ್ಯಾದಿದಾರರ ಹೆಂಡತಿ ಸರಸ್ವತಿ ಹೋಗಿದ್ದು 11:30 ಗಂಟೆ ಸಮಯಕ್ಕೆ ವಾಪಸು ಮನೆಗೆ ಬಂದಾಗ ಮನೆಯ ಬಾಗಿಲು ತೆರೆದ ಸ್ಥಿತಿಯಲ್ಲಿತ್ತು. ಮನೆಯ ಒಳಹೋಗಿ ನೋಡಿದಾಗ ಕಪಾಟಿನ ಬಾಗಿಲನ್ನು ಬಲವಂತದಿಂದ ತೆಗೆದಿದ್ದು ಅದರ ಒಳಗಿದ್ದ ಒಂದು ಲಕ್ಷದ ಹತ್ತು ಸಾವಿರ ಬೆಲೆಯ ಬಂಗಾರದ ಮುತ್ತಿನ ಸರ, ಬಂಗಾರದ ಕಾಸಿನ ತಾಳಿ ಸರ, ಜೋಮಾಲೆ, ಮಗುವಿನ ಚೈನ್-1, ಹೆಂಗಸರ ಉಂಗುರ-2 ಕಳವಾಗಿದ್ದು  ಯಾರೋ ಮನೆಯ ಬೀಗದ ಕೈಯನ್ನು ತೆಗೆದು ಆ ಮೂಲಕ ಬಾಗಿಲಿನ ಬೀಗ ತೆರೆದು ಮನೆಯ ಒಳ ಪ್ರವೇಶಿಸಿ ಈ ಕಳವು ಮಾಡಿದ್ದು ಪಿರ್ಯಾದಿದಾರರು ಹೃದಯ ಚಿಕಿತ್ಸೆಗೆಗೊಳಗಾದ ಕಾರಣ ಕಳವಿನ ವಿಷಯ ತಿಳಿಸುವರೇ ಮತ್ತೆ ಆಘಾತವಗಿರಬಹುದು ಎಂದು ಪಿರ್ಯಾದಿದಾರರ ಹೆಂಡತಿ ಈ ವಿಷಯವನ್ನು ತಿಳಿಸದೆ ದಿನಾಂಕ: 16-11-2017 ರಂದು ಕಳವಿನ ವಿಷಯ ಪಿರ್ಯಾದಿಯವರಿಗೆ ತಿಳಿಸಿ ಪ್ರಕರಣ ದಾಖಲಿಸಿರುವುದು ಎಂಬಿತ್ಯಾದಿ