Illegal sand mining Raid:

 

 

ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣಾ ಸರಹದ್ದಿನ ಮಂಗಳೂರು ತಾಲೂಕು ಅಡ್ಯಾರು ಗ್ರಾಮದ ಸಹ್ಯಾದ್ರಿ ಕಾಲೇಜ್ ಎಂಬಲ್ಲಿನ ಹಿಂಬದಿಯ ನೇತ್ರಾವತಿ ನದಿಯಿಂದ ಅಕ್ರಮವಾಗಿ ಮರಳನ್ನು ತೆಗೆದು  ಯಂತ್ರೋಪಕರಣ ಸಹಾಯದಿಂದ ವಾಹನಗಳಿಗೆ ಲೋಡ್‌ ಮಾಡುವ ಬಗ್ಗೆ ಹಾಗೂ ಖಾಸಗಿ ಜಮೀನಿನಲ್ಲಿ ಅಕ್ರಮವಾಗಿ ಮರಳು ಶೇಖರಿಸಿ ವಾಹನಗಳಿಗೆ  ಪ್ಲಾಸ್ಟಿಕ್‌ ಚೀಲದ ಮೂಲಕ  ಮರಳನ್ನು ತುಂಬಿಸಿ  ಹೊರ ಜಿಲ್ಲೆ ಮತ್ತು ಹೊರ ರಾಜ್ಯಕ್ಕೆ ಸಾಗಾಟ ಮಾಡುತ್ತಿರುವ ಬಗ್ಗೆ ಖಚಿತ ಮಾಹಿತಿ ಬಂದಿರುವ  ಮೇರೆಗೆ  ಮೇಲಾಧಿಕಾರಿಗಳ ಆದೇಶದಂತೆ ದಕ್ಷಿಣ ಉಪ ವಿಭಾಗದ, ಸಹಾಯಕ ಪೊಲೀಸ್ ಆಯುಕ್ತರು, ಮಂಗಳೂರು ಗ್ರಾಮಾಂತರ ಠಾಣಾ ಪೊಲಿಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಮತ್ತು ಕಂಕನಾಡಿ ನಗರ ಠಾಣಾ ಪೊಲೀಸ್ ಆಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ  ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿ ಹಾಗೂ ಸಿಬ್ಬಂದಿಗಳ ಜಂಟಿ ಕಾರ್ಯಾಚರಣೆಯಲ್ಲಿ ಅಡ್ಯಾರು ಗ್ರಾಮದ ಸಹ್ಯಾದ್ರಿ ಕಾಲೇಜ್‌ ಹಿಂಭಾಗದ ನೇತ್ರಾವತಿ ನದಿಯ ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಲಾಗಿ,

  • ನೇತ್ರಾವತಿ ನದಿಯಿಂದ ಸಾಮಾನ್ಯ ಮರಳನ್ನು ತೆಗೆದು  ಟೆಲ್ ಕಾನ್ ಮತ್ತು ಕೆಲ್ ಕಾನ್ ಕಂಪನಿಯ 2 ಹಿಟಾಚಿ ಯಂತ್ರಗಳು
  • 2  ಜೆಸಿಬಿ  ಯಂತ್ರಗಳ  ಸಂಖ್ಯೆ ಕೆ.ಎ 19 ಎಂ.ಜಿ.1615 ಕೆ.ಎ 13 ಎನ್ 3087
  • ಮರಳು ತುಂಬಿದ ಚೀಲಗಳನ್ನು ಲಾರಿಗಳಾದ  ಕೆ.ಎ 19.ಎಬಿ.4861 ಮತ್ತು ಕೆಎ.19.ಎಬಿ.3272 ಹಾಗೂ ಕ್ಯಾಂಟರ್‌
  • ಪ್ಲಾಸ್ಟಿಕ್‌ ಚೀಲಗಳಲ್ಲಿ ಮರಳನ್ನು ತುಂಬಿಸಿ ಸದ್ರಿ ವಾಹನಗಳಾದ  ಕೆಎ.19.ಎಎ.9875 ಮತ್ತು ಕೆಎ.19.ಎಬಿ.4910 ವಾಹನಗಳಲ್ಲಿ ತುಂಬಿಸಿ  ಹೊರ ಜಿಲ್ಲೆ ಹಾಗೂ ಹೊರ ರಾಜ್ಯಕ್ಕೆ ಸಾಗಿಸಲು ಸಿದ್ದಗೊಳಿಸಿರುವುದು

          ಮೇಲ್ಕಂಡ ವಾಹನಗಳಲ್ಲಿ ತುಂಬಿಸಿ ಅಲ್ಲಿಂದ  ಸಮೀಪದ  ಖಾಸಗಿ ಜಮೀನಿನಲ್ಲಿ  ಅಕ್ರಮವಾಗಿ ಶೇಖರಿಸಿ  ಅಲ್ಲಿಂದ  ವಾಹನಗಳ ಮಾಲಿಕರುಗಳ  ಹಾಗೂ ಅಕ್ರಮ ಮರಳು ಶೇಖರಣೆಗೆ ಅವಕಾಶ ನೀಡಿದ್ದ ಭೂ ಮಾಲಿಕರ ವಿರುದ್ದ ಮಂಗಳೂರು ಗ್ರಾಮಾಂತರ ಠಾಣಾ ಅ.ಕ್ರ 230/2017 ಕಲಂ: ಕರ್ನಾಟಕ  ಉಪ ಖನಿಜ ರಿಯಾಯಿತಿ ನಿಯಮಾವಳಿ 1994 ರ ನಿಯಮ 3, 36, 42,  ಮತ್ತು 44 ಹಾಗೂ  ಮೈನ್ಸ್‌  ಅಂಡ್‌ ಮಿನರಲ್ಸ್‌  (ರೆಗ್ಯೂಲೇಶನ್‌ ಅಂಡ್‌  ಡೆವೆಲೆಪ್‌ಮೆಂಟ್‌ ) ಕಾಯ್ದೆ-1957 ರ 4, 4(1ಎ), 21(4), (4ಎ) ಹಾಗೂ ಐಪಿಸಿ  379 ರ ಅಡಿಯಲ್ಲಿ  ಪ್ರಕರಣ ದಾಖಲಿಸಿಕೊಳ್ಳಲಾಗಿರುತ್ತದೆ. ಆರೋಪಿಗಳಾದ  ಅಬ್ದುಲ್ ಲತೀಪ್ ಮತ್ತು ಜಾಗದ ಮಾಲಿಕರಾದ ಡೆಲ್ವಿ ಆಸ್ಟಿನ್ ಫೆರ್ನಾಂಡಿಸ್ ಮತ್ತು ವಾಹನಗಳ ಮಾಲಿಕರ ವಿರುದ್ದ ಪ್ರಕರಣ ದಾಖಲಾಗಿರುತ್ತದೆ. ಸದರಿ ಕಾರ್ಯಚರಣೆಯ ವೇಳೆ ವಶಪಡಿಸಿಕೊಂಡ ಯಂತ್ರೋಪಕರಣಗಳು, ಮರಳು ತುಂಬಿದ ವಾಹನಗಳು ಹಾಗೂ ಮರಳಿನ ಒಟ್ಟು ಅಂದಾಜು ಮೌಲ್ಯ ರೂಪಾಯಿ 1,40,26,000/- ಆಗಬಹುದಾಗಿದೆ ಎಂಬಿತ್ಯಾಧಿ.

        ಮಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಟಿ.ಆರ್‌.ಸುರೇಶ್, ಐ.ಪಿ.ಎಸ್. ರವರ ನಿರ್ದೇಶನದಂತೆ, ಮಾನ್ಯರಾದ ಶ್ರೀ ಹನುಮಂತರಾಯ (ಐಪಿಎಸ್‌) ಡಿ.ಸಿ.ಪಿ (ಕಾನೂನು ಮತ್ತು ಸುವ್ಯವಸ್ಥೆ) ಮತ್ತು  ಶ್ರೀಮತಿ ಉಮಾ ಪ್ರಶಾಂತ್, ಡಿ.ಸಿ.ಪಿ (ಅಪರಾಧ ಮತ್ತು ಸಂಚಾರ ವಿಭಾಗ) ರವರ ಮಾರ್ಗದರ್ಶನದಲ್ಲಿ  ಸದ್ರಿ ಕಾರ್ಯಾಚರಣೆಯನ್ನು ನಡೆಸಲಾಗಿರುತ್ತದೆ.

Leave a Reply

Your email address will not be published. Required fields are marked *