Mangalore City Police

SSLC EXAM ; Sec 144 CrPC

SSLC Exam 2019 – Sec 144 CrPC – reg
Read more

Daily Crime Reports : April 22, 2019

Crime Reported in Bajpe Police Station

“ಫಿರ್ಯಾದಿದಾರರು ದಿನಾಂಕ 21.04.2019 ರಂದು ಬಂಟ್ವಾಳ ತಾಲೂಕಿನ ಗೋಳ್ತಮಜಲಿನಿಂದ ತಮ್ಮ ಮನೆಗೆ ತಮ್ಮ ಮಗ ಭರತ್ ಕುಮಾರ್ ಎಂಬವರ ಮೋಟಾರ್ ಸೈಕಲ್ ನಂಬ್ರ ಕೆಎ-19ಇಡಿ-0868 ನೇಯದರಲ್ಲಿ ಸಹ ಸವಾರಳಾಗಿ ಕುಳಿತುಕೊಂಡು ಗುರುಪುರ ಕೈಕಂಬದಿಂದ ಬಜಪೆ ಕಡೆಗೆ ಡಾಮಾರು ರಸ್ತೆಯಲ್ಲಿ ಬರುತ್ತಿರುವಾಗ ಸಂಜೆ ಸುಮಾರು 17:15 ಗಂಟೆಗೆ ಮಂಗಳೂರು ತಾಲೂಕು, ಬಜಪೆ ಗ್ರಾಮದ ಬಜಪೆ ಪೊಲೀಸ್ ಠಾಣೆ ಬಳಿ ತಲುಪುತ್ತಿದ್ದಂತೆಯೇ ಮೋಟಾರ್ ಸೈಕಲನ್ನು ಅದರ ಸವಾರ ಭರತ್ ಕುಮಾರ್ ಈತನು ಅತೀವೇಗ ಹಾಗೂ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆಗೆ ಹಾಕಲಾಗಿದ್ದ ಹಂಪ್ಸ್ ಬಳಿ ಒಮ್ಮೇಲೇ ಬ್ರೇಕ್ ಹಾಕಿದ ಪರಿಣಾಮ ಮೋಟಾರ್ ಸೈಕಲಿನ ಹಿಂಬದಿಯಲ್ಲಿ ಕುಳಿತ್ತಿದ್ದ ಫಿರ್ಯಾದಿದಾರರು ರಸ್ತೆಗೆ ಬಿದ್ದು ಫಿರ್ಯಾದಿಯ ತಲೆಯ ಹಿಂಭಾಗಕ್ಕೆ ಗಾಯವಾಗಿದ್ದು ಗಾಯಾಳುವನ್ನು ಮಗ ಭರತ್ ಕುಮಾರ್, ಪದ್ಮನಾಭ ಮತ್ತು ಗಂಡ ನಾರಾಯಣ ಮೂಲ್ಯರವರು ಚಿಕಿತ್ಸೆ ಬಗ್ಗೆ ಮಂಗಳೂರು ಎ.ಜೆ. ಆಸ್ಪತ್ರೆಗೆ ಕೊಂಡು ಹೋದಲ್ಲಿ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ”

Crime Reported in Mangalore Traffic North Police Station

ದಿನಾಂಕ 20/04/2019 ರಂದು ಸಮಯ 10:45 ಗಂಟೆಗೆ ಪಿರ್ಯಾದಿದಾರರಾದ ಸುಕುಮಾರ್ ರವರು ಅವರ ತಾಯಿ ಶ್ರೀಮತಿ ವಸಂತಿ ಮತ್ತು ಚಿಕ್ಕಮ್ಮ ಚಂದ್ರವತಿರವರೊಂದಿಗೆ ಮುಲ್ಕಿ ವಿಜಯ ಬ್ಯಾಂಕಿನ ಎದುರು ರಾ.ಹೆ 66ನ್ನು ಪೂರ್ವದ ಬದಿಯಿಂದ ಪಶ್ಚಿಮದ ಬದಿಗೆ ದಾಟಿ ಪಶ್ಚಿಮದ ಬದಿಗೆ ತಲುಪಿದಾಗ ಮಂಗಳೂರು ಕಡೆಯಿಂದ ಉಡುಪಿ ಕಡೆಗೆ KA-20-D-6591 ನೇ ನಂಬ್ರದ ಮಾರುತಿ ಇಕೋ ವಾಹನವನ್ನು ಅದರ ಚಾಲಕ ಶುಭಕರ ಬಂಗೇರರವರು ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ರಸ್ತೆಯ ಎಡಬದಿಗೆ ಚಲಾಯಿಸಿ ಪಿರ್ಯಾದಿದಾರರ ಜೊತೆಯಲ್ಲಿ ನಿಂತಿದ್ದ ಶ್ರೀಮತಿ ವಸಂತಿರವರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ರಸ್ತೆಗೆ ಬಿದ್ದು ಸೊಂಟಕ್ಕೆ ಗಂಭೀರ ಸ್ವರೂಪದ ಗಾಯವಾಗಿ ಚಿಕಿತ್ಸೆಯ ಬಗ್ಗೆ ಮುಲ್ಕಿ ನರ್ಸಿಂಗ್ ಹೋಮ್ ನಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿ ಪಿರ್ಯಾದಿ ಸಾರಾಂಶ.