Ganja Seized :Two Held

ದಿನಾಂಕ: 07/11/2017 ರಂದು  ವಾಮಂಜೂರಿನ ಕರಾವಳಿ ಕಾಲೇಜು ಆಫ್ ಫಾರ್ಮಸಿ ಬಸ್ಸು ತಂಗುದಾಣದ ಸಮೀಪದಲ್ಲಿ  ಹೊಂಡಾ ಆಕ್ಟಿವಾ  ಮತ್ತು ಸುಝುಕಿ ಆಕ್ಸೆಸ್ ಸ್ಕೂಟರಿನಲ್ಲಿ ಬಂದು  ವಿದ್ಯಾರ್ಥಿಗಳಿಗೆ  ಮಾದಕ ವಸ್ತುವಾದ ಗಾಂಜಾವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ  (1) ದೀಪಕ್ (23 ವರ್ಷ) ತಂದೆ: ಪುರುಷೋತ್ತಮ  ರಾವ್  ವಾಸ : ನಿಯರ್ ಮಸೀದಿ ರೋಡ್, ದೇವಿನಗರ ಕುಂಜತ್ ಬೈಲ್,ಮಂಗಳೂರು (2) ಪ್ರಜ್ವಲ್  (20 ವರ್ಷ) ತಂದೆ: ಅಶೋಕ್ ಶೆಟ್ಟಿ ವಾಸ : ಪಡ್ಪು ಹೌಸ್, ದೈವಲ ಗುಡ್ಡೆ, ಕುಂಜತ್ ಬೈಲ್, ಮಂಗಳೂರು ಎಂಬವರನ್ನು ಮಂಗಳೂರು ಗ್ರಾಮಾಂತರ ಠಾಣೆಯ ಪೊಲೀಸು ನಿರೀಕ್ಷಕರಾದ ಸಿದ್ದಗೌಡ ಭಜಂತ್ರಿ ಇವರು ತಮಗೆ ದೊರೆತ ಖಚಿತ ವರ್ತಮಾನದ ಮೇರೆಗೆ ದಸ್ತಗಿರಿ ಮಾಡಿ ಸದ್ರಿ ಆರೋಪಿಗಳ ವಶದಲ್ಲಿದ್ದ ಸುಮಾರು 35 ಗ್ರಾಂ ಗಾಂಜಾ ಹಾಗೂ ಆರೋಪಿಗಳು ಗಾಂಜಾ ಮಾರಾಟ ಮಾಡುವರೇ ಬಂದಿದ್ದ ಹೊಂಡಾ ಆಕ್ಟಿವಾ ಸ್ಕೂಟರ್ ಮತ್ತು ಆಕ್ಸಿಸ್ 125 ಸ್ಕೂಟರನ್ನು ಸ್ವಾಧೀನಪಡಿಸಿ ಆರೋಪಿಗಳ ವಿರುದ್ದ ಪ್ರಕರಣ ದಾಖಲಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಪ್ರಸ್ತುತ ಆರೋಪಿಗಳು ಮಾನ್ಯ ನ್ಯಾಯಾಲಯದ ಆದೇಶದಂತೆ ನ್ಯಾಯಾಂಗ ಬಂಧನದಲ್ಲಿರುತ್ತಾರೆ.

ಮಂಗಳೂರು ನಗರದಲ್ಲಿ ಗಾಂಜಾ-ಮಾದಕವಸ್ತುವಿನ ದಂಧೆಯನ್ನು  ಮಟ್ಟ ಹಾಕುವರೇ ಪೊಲೀಸು ಆಯುಕ್ತರು, ಮಂಗಳೂರು ನಗರ ಮತ್ತು ಪೊಲೀಸು ಉಪಾಯುಕ್ತರು  ಮಂಗಳೂರು ನಗರ ಇವರ ಕಟ್ಟುನಿಟ್ಟಿನ ಆದೇಶದ ಮೇರೆಗೆ, ಸಹಾಯಕ ಪೊಲೀಸು ಆಯುಕ್ತರು ದಕ್ಷಿಣ ಉಪವಿಭಾಗದ ಸಹಾಯಕ ಪೊಲೀಸು ಆಯುಕ್ತರಾದ ಶ್ರೀ.ರಾಮರಾವ್ ರವರ ಮಾರ್ಗದರ್ಶನದಲ್ಲಿ , ಮಂಗಳೂರು ಗ್ರಾಮಾಂತರ ಪೊಲೀಸು  ಠಾಣಾ  ಪೊಲೀಸು ನಿರೀಕ್ಷಕರಾದ ಸಿದ್ದಗೌಡ ಭಜಂತ್ರಿ ಇವರು  ನಡೆಸಿದ ಈ ಧಾಳಿಯಲ್ಲಿ  ಮಂಗಳೂರು ಗ್ರಾಮಾಂತರ ಠಾಣಾ ಸಿಬ್ಬಂದಿಯವರಾದ ಸುಧೀರ್, ಕುಶಾಲ್ ಹೆಗ್ಡೆ, ಲತೇಶ್ ನಾಯ್ಕರವರು  ಸಹಕರಿಸಿದ್ದರು.

ಮಂಗಳೂರು ನಗರದ ಮಾನ್ಯ ಪೊಲೀಸ್ ಆಯುಕ್ತರಾದ ಶ್ರೀ ಟಿ.ಆರ್‌.ಸುರೇಶ್, ಐ.ಪಿ.ಎಸ್. ರವರ ನಿರ್ದೇಶನದಂತೆ, ಮಾನ್ಯರಾದ ಶ್ರೀ ಹನುಮಂತರಾಯ (ಐಪಿಎಸ್‌) ಡಿ.ಸಿ.ಪಿ (ಕಾನೂನು ಮತ್ತು ಸುವ್ಯವಸ್ಥೆ) ಮತ್ತು  ಶ್ರೀಮತಿ ಉಮಾ ಪ್ರಶಾಂತ್, ಡಿ.ಸಿ.ಪಿ (ಅಪರಾಧ ಮತ್ತು ಸಂಚಾರ ವಿಭಾಗ) ರವರ ಮಾರ್ಗದರ್ಶನದಲ್ಲಿ  ಸದ್ರಿ ಕಾರ್ಯಾಚರಣೆಯನ್ನು ನಡೆಸಲಾಗಿರುತ್ತದೆ.

Leave a Reply

Your email address will not be published. Required fields are marked *