Crime Reported in Ullala Police Station

ಫಿರ್ಯಾದಿದಾರರಾದ ಪ್ರಣಮ್ ಎಂಬವರು ತನ್ನ ಸ್ನೇಹಿತ ಶೇಖರ ಗಟ್ಟಿ ಎಂಬವರ ಮಾಲಕತ್ವದ ಕೆಎ-19-ಇಹೆಚ್-4195 ನೇ ನಂಬ್ರದ ಯಮಹಾ ಎಪ್ಝಡ್ ಮೋಟಾರು ಸೈಕಲನ್ನು ಕ್ರಯಕ್ಕೆ ಖರೀದಿಸಿಕೊಂಡು ತನ್ನ ಸ್ವಂತಕ್ಕೆ ಉಪಯೋಗಿಸಿಕೊಂಡಿದ್ದು, ಅದರಂತೆ ಫಿರ್ಯಾದಿದಾರರು ದಿನಾಂಕ. 2-10-2018 ರಂದು ರಾತ್ರಿ 8-30 ಗಂಟೆಯ ಸಮಯಕ್ಕೆ ಮಂಗಳೂರು ತಾಲೂಕು ಉಳ್ಳಾಲ ಗ್ರಾಮದ ತೊಕ್ಕೊಟು ಶಿವಾಜಿ ಕ್ಲಬ್ ಬಳಿ ಇರುವ ಅಜ್ಜನಕಟ್ಟೆಯ ಬಳಿಗೆ ಬಂದು ಅಲ್ಲಿಯೇ ಸಮೀಪದ ರಸ್ತೆಯ ಬದಿಯಲ್ಲಿ ತನ್ನ ಬಾಬ್ತು ಕೆಎ-19-ಇಹೆಚ್-4195 ನೇ ಮೋಟಾರು ಸೈಕಲನ್ನು ನಿಲ್ಲಿಸಿ ಅದಕ್ಕೆ ಹ್ಯಾಂಡ್ಲಾಕ್ ಮಾಡಿ ತೊಕ್ಕೊಟು ಒಳಪೇಟೆಯ ಕಡೆಗೆ ಹೋಗಿ ವಾಪಾಸು ರಾತ್ರಿ 10:00 ಗಂಟೆಯ ಸಮಯಕ್ಕೆ ಬಂದು ತಾನು ನಿಲ್ಲಿಸಿದ್ದ ಮೋಟಾರು ಸೈಕಲನ್ನು ನೋಡುವಾಗ್ಗೆ ಸದ್ರಿ ಮೋಟಾರು ಸೈಕಲನ್ನು ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ. ಕಳವಾದ ಮೋಟಾರು ಸೈಕಲಿನ ಅಂದಾಜು ಮೌಲ್ಯ ರೂ.27,000/= ಆಗಬಹುದು ಎಂಬಿತ್ಯಾದಿ.

Leave a Reply

Your email address will not be published. Required fields are marked *