Crime Reported in Surathkal Police Station

ಪಿರ್ಯಾದಿದಾರರು ಮಂಗಳೂರು ತಾಲೂಕು ಸೂರಿಂಜೆ ಗ್ರಾಮದ ದಾರುಸ್ಸಲಾಮ್ ಎಂಬ ಮನೆಯಲ್ಲಿ ವಾಸವಾಗಿದ್ದು, ದಿನಾಂಕ: 05/10/2018 ರಂದು ಅವರ ಮಗಳು ಶೈನಾಝ್ ರವರು ತವರು ಮನೆಗೆ ಬಂದಿರುತ್ತಾರೆ. ದಿನಾಂಕ: 09/10/2018 ರಂದು 23.00 ಗಂಟೆಗೆ ಎಲ್ಲರೂ ಊಟ ಮಾಡಿ ಮಲಗಿದ್ದು, ಈ ದಿನ ದಿನಾಂಕ: 10/10/2018 ರಂದು ಬೆಳಿಗ್ಗೆ ಸುಮಾರು 07.30 ಗಂಟೆಗೆ ಎದ್ದು ನೋಡಿದಾಗ ಯಾರೋ ಕಳ್ಳರು ಪಿರ್ಯಾದಿದಾರರ ಮನೆಯ ಅಡುಗೆ ಕೋಣೆಯ ಗೋಡೆಗೆ ಅಳವಡಿಸಿದ ಕಬ್ಬಿಣದ ಪಟ್ಟಿಯ ಸಹಾಯದಿಂದ ಮೊದಲನೇ ಮಹಡಿಯಲ್ಲಿರುವ ಸಿಟೌಟ್ ಸೈಡ್ ಡೋರ್ ಮೂಲಕ ಮನೆಯ ಒಳಗಡೆ ಪ್ರವೇಶಿಸಿ, ಪಿರ್ಯಾದಿದಾರರ ಮಗಳು ಮಲಗಿರುವ ಬೆಡ್ ರೂಮಿನ ಕಪಾಟಿನಲ್ಲಿರಿಸಿದ್ದ ಶೈನಾಝ್ ರವರ 51 ಗ್ರಾಂ ತೂಕದ ವಿವಿಧ ರೀತಿಯ ಚಿನ್ನಾಭರಣಗಳನ್ನು ಹಾಗೂ 4,000/- ರೂಪಾಯಿ ನಗದನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಸೊತ್ತಿನ ಒಟ್ಟು ಅಂದಾಜು ಮೌಲ್ಯ ರೂ. 1,50,000/- ಆಗಬಹುದು.

Leave a Reply

Your email address will not be published. Required fields are marked *