Crime Reported in Surathkal Police Station

ಪಿರ್ಯಾದಿದಾರರ ತಂದೆ ಸುಬ್ರಹ್ಮಣ್ಯ ಭಟ್ 60 ವರ್ಷ ಎಂಬವರು ದಿನಾಂಕ 30/11/2017 ರಂದು ಬೆಳಿಗ್ಗೆ ಸುಮಾರು 08.45 ಗಂಟೆಗೆ ಮಂಗಳೂರು ತಾಲೂಕು ಕುಳಾಯಿ ಗ್ರಾಮದ ಚಿತ್ರಾಪುರ ಎಂಬಲ್ಲಿರುವ ತನ್ನ ಮನೆಯಿಂದ ಹೋದವರು ಈ ವರೆಗೆ ಮನೆಗೆ ಬಾರದೇ ಕಾಣೆಯಾಗಿದ್ದು, ಕಾಣೆಯಾದವರನ್ನು ಸಂಬಂಧಿಕರಲ್ಲಿ ಹಾಗೂ ಸ್ನೇಹಿತರಿಗೆ ಸಂಪರ್ಕಿಸಿ ವಿಚಾರಿಸಿದ್ದಲ್ಲಿ ಯಾವುದೇ ಮಾಹಿತಿ ಸಿಕ್ಕಿರುವುದಿಲ್ಲ. ಹೆಸರು: ಪಿ.ಎನ್. ಸುಬ್ರಹ್ಮಣ್ಯ ಭಟ್, ಪ್ರಾಯ: 60 ವರ್ಷ, ಎತ್ತರ: 5 ಅಡಿ, ಮೈಬಣ್ಣ : ಗೋಧಿ ಮೈಬಣ್ಣ, ಸಾದಾರಣ ಮೈಕಟ್ಟು, ಅರ್ಧ ಬೋಳು ತಲೆ, ತಲೆಯಲ್ಲಿ ಜುಟ್ಟು ಇದೆ. ಕನ್ನಡ, ತುಳು, ಹಿಂದಿ ಭಾಷೆ ಮಾತನಾಡುತ್ತಾರೆ. ಬಿಳಿ ಪಂಚೆ, ಕ್ರೀಂ ಕಲರಿನ ಅರ್ಧ ತೋಳಿನ ಅಂಗಿ ಧರಿಸಿರುತ್ತಾರೆ. ಸದ್ರಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *