Crime Reported in Panambur PS

ಪಿರ್ಯದಿ SAMSUDDIN HASANFIR MUZAWAR ದಾರರು ಬಿಜಾಪುರದ ವಾಸಿಯಾಗಿದ್ದು ಲಾರಿ ನಂಬ್ರ ಎಮ್.ಹೆಚ್.10-ಝೆಡ್-0759ನೇ ಲಾರಿ ಚಾಲಕರಾಗಿದ್ದು ಪಿರ್ಯಾದಿದಾರರ ಮಗ ಗೌಸು ಸಂಶುದ್ದಿನ್ ಮುಝಾವರ್ ರವರು ಲಾರಿಯ ಕ್ಲೀನರ್ ಆಗಿ ಕೆಲಸವನ್ನು ಮಾಡಿಕೊಂಡಿರುತ್ತಾರೆ. ಪಿರ್ಯಾದಿದಾರರು ಮಹಾರಾಷ್ಟ್ರದಿಂದ ಪಿ.ವಿ.ಎಸ್.ಪೈಪನ್ನು ಲೋಡ್ ಮಾಡಿಕೊಂಡು ದಿನಾಂಕಃ-09-10-2019 ರಂದು ಸಂಜೆ 04-00 ಗಂಟೆಗೆ ಮಂಗಳೂರು ಬಂದರಿನಲ್ಲಿರುವ ಸಿದ್ಧಿ ವಿನಾಯಕ ಏಜೇನ್ಸಿಯಲ್ಲಿ ಪೈಪನ್ನು ಅನ್ ಲೋಡ್ ಮಾಡಿ ನಂತರ ಪಾಮೊಲಿನ್ ಆಯಿಲ್ ಲೋಡ್ ಬಗ್ಗೆ ಪಣಂಬೂರು ಬಿಚ್ ರಸ್ತೆಯಲ್ಲಿರುವ ಡಿಯನ್ ಕಾರ್ಗೊ ಟ್ರಾನ್ಸಪೊರ್ಟ್ ಕಛೇರಿಯ ಪಕ್ಕದ ರಸ್ತೆ ಬದಿಯಲ್ಲಿ ಲಾರಿಯನ್ನು ನಿಲ್ಲಿಸಿ ಪಿರ್ಯಾದಿದಾರರು ಮತ್ತು ಮಗ ಲಾರಿಯಲ್ಲಿಯೇ ಮಲಗಿರುವಾಗ ದಿನಾಂಕಃ-10-01-2019 ರಂದು ಬೆಳಿಗ್ಗೆ 05-30 ಗಂಟೆಗೆ ಸ್ಕೂಟರ್ ಒಂದರಲ್ಲಿ ಇಬ್ಬರು ಯುವಕರು ಬಂದು ಸ್ಕೂಟರನ್ನು ಲಾರಿಯ ಹತ್ತಿರ ನಿಲ್ಲಿಸಿ ಇಬ್ಬರು ಯುವಕರು ಲಾರಿಯ ಕ್ಯಾಬಿನ್ ಒಳಗಡೆ ಬಂದು ಮೊಬೈಲ್ ಪೋನ್ ಹಾಗೂ ಹಣ ಕೊಡುವಂತೆ ಚೂರಿ ತೋರಿಸಿ ಬೆದರಿಸಿದ್ದು ಆ ಸಮಯ ಪಿರ್ಯಾದಿದಾರರು ಮೊಬೈಲ್ ಫೋನ್ ಹಾಗೂ ಹಣ ಕೊಡದೆ ಇದ್ದಾಗ ಪಿರ್ಯಾದಿದಾರರಿಗೆ ನೋಡಿ ಪರಿಚಯವಿರುವ ಇಬ್ಬರು ಯುವಕರಲ್ಲಿ ಅಬ್ದುಲ್ ಅಮೀರ್ ಎಂಬಾತನು ತನ್ನ ಕೈಯಲ್ಲಿದ್ದ ಚೂರಿಯಿಂದ ಪಿರ್ಯಾದಿದಾರರ ಹಣೆಗೆ ಹಲ್ಲೆ ನಡೆಸಿದ್ದು ಜೋತೆಯಲ್ಲಿದ್ದ ಬಿಲಾಲ್ ಎಂಬಾತನು ಕೂಡಾ ಪಿರ್ಯಾದಿದಾರರಿಗೆ ಹಲ್ಲೆ ಮಾಡಿ ಪಿರ್ಯಾದಿದಾರರ ಕಿಸೆಯಲ್ಲಿದ್ದ ಮೊಬೈಲ್ ಪೋನನ್ನು ಕಸಿದುಕೊಂಡಾಗ ಪಿರ್ಯಾದಿದಾರರು ಜೋರಾಗಿ ಬೊಬ್ಬೆ ಹೊಡೆದುದನ್ನು ಕೇಳಿ ಲಾರಿಯ ಕ್ಯಾಬಿನ್ ಮೇಲೆ ಮಲಗಿದ್ದ ಮಗ ಗೌಸು ಸಂಶುದ್ದಿನ್ ಮುಝಾವರ್ ಎದ್ದು ಬರುತ್ತಿದ್ದಂತೆ ಮೊಬೈಲ್ ನೊಂದಿಗೆ ಅಬ್ದುಲ್ ಅಮೀರ್ ಹಾಗೂ ಬಿಲಾಲ್ ಇಬ್ಬರು ಅವರು ಬಂದ ಸ್ಕೂಟರಿನಲ್ಲಿ ಪರಾರಿಯಾಗಿದ್ದು ಪಿರ್ಯಾದಿದಾರರಿಗೆ ಚೂರಿಯಿಂದ ಹಲ್ಲೆ ಮಾಡಿದ ಪರೀಣಾಮ ಹಣೆಗೆ ರಕ್ತ ಗಾಯವಾಗಿರುತ್ತದೆ. ಪಿರ್ಯಾದಿದಾರರಿಂದ ದೊಚಿಕೊಂಡು ಹೋದ ಕಾರ್ಬನ್ ಕಂಪೆನಿಯ ಕೀ ಪ್ಯಾಡ್ ಮೊಬೈಲ್ ಫೋನ್ ಆಗಿದ್ದು ಅದರ ಅಂದಾಜು ಮೌಲ್ಯ 500/- ರೂ. ಆಗಬಹುದು ಎಂಬಿತ್ಯಾದಿ ಸಾರಾಂಶವಾಗಿರುತ್ತದೆ.

Leave a Reply

Your email address will not be published. Required fields are marked *