Crime Reported in M’Rural Police Station

ಪಿರ್ಯಾದಿ ಪುತ್ತೂರು ನಿವಾಸಿ ವಿ ಹಂಝ ರವರು ತನ್ನ ಸಹ ಚಾಲಕ ಹಿದಾಯತ ಎಂಬವರೊಂದಿಗೆ ದಿನಾಂಕ 16.06.2017 ರಂದು ಮಂಗಳೂರು ತಾಲೂಕು ಅಡ್ಯಾರ್ ಗ್ರಾಮದ ಸಹ್ಯಾದ್ರಿ ಕಾಲೇಜಿನ ಎದುರು ರಸ್ತೆ ಬದಿಯಲ್ಲಿ ತನ್ನ ಬಾಬ್ತು ಲಾರಿಯನ್ನು ನಿಲ್ಲಿಸಿ ಪಕ್ಕದಲ್ಲಿರುವ ಡಾಬಾದಲ್ಲಿ ಊಟ ಮುಗಿಸಿ, ರಾತ್ರಿ 21.30 ಗಂಟೆಗೆ ತಮ್ಮ ಲಾರಿಯಲ್ಲಿ ಕುಳಿತಿದ್ದಾಗ, ಪಿರ್ಯಾದಿದಾರರು ಈ ಹಿಂದೆ ಚಾಲಕನಾಗಿ ದುಡಿಯುತ್ತಿದ್ದ ಲಾರಿಯ ಮಾಲಕ ಜೋಕಟ್ಟೆಯ ರಿಯಾಜ್, ಹಾಗೂ ಅನ್ವರ ಮತ್ತು ಇಬ್ರಾಹಿಂ ಎಂಬವರು ಕೆಂಪು ಬಣ್ಣದ ಸ್ವಿಪ್ಟ ಕಾರ ನಂಬ್ರ ಕೆಎ-19-ಎಮ್ಎಫ್-212 ನೇ ದರಲ್ಲಿ ಬಂದು ಪಿರ್ಯಾದಿದಾರರನ್ನು ಲಾರಿಯಿಂದ ಕೆಳಗೆ ಇಳಿಯುವಂತೆ ರಿಯಾಜ್ ಎಂಬವರು ಹೇಳಿದಾಗ, ಪಿರ್ಯಾದಿದಾರರು ಲಾರಿಯಿಂದ ಕೆಳಗೆ ಇಳಿದಾಗ, ರಿಯಾಜ್ ರವರು ಬೇವರ್ಸಿ ರಂಡೇಮಗ ನೀನು ನಮ್ಮ ಲಾರಿಯನ್ನು ಯಾಕೆ ಬಿಟ್ಟು ಬಂದದ್ದು, ನಿನ್ನಿಂದಾಗಿ ನನ್ನ ಲಾರಿಗೆ ಚಾಲಕ ಇಲ್ಲದೇ ಲಾರಿ ನಿಂತಿದೆ ಎಂದು ಅವಾಚ್ಯವಾಗಿ ಬೈದು ಕಾಲಿನಿಂದ ತುಳಿದಾಗ, ಇಬ್ರಾಹಿಂನು ಆತನ ಕೈಯಲ್ಲಿದ್ದ ಕಬ್ಬಿಣದ ರಾಡನಿಂದ ಪಿರ್ಯಾದಿದಾರರ ಬಲ ಭುಜಕ್ಕೆ ಹೊಡೆದಿದ್ದು, ಅಲ್ಲದೇ ಅನ್ವರನು ಕೈಯಿಂದ ಮುಖಕ್ಕೆ ಹೊಡೆದ ಪರಿಣಾಮ ಪಿರ್ಯಾದಿದಾರರ ತುಟಿ ಒಡೆದು ಗಾಯವಾಗಿ ರಕ್ತ ಬಂದಿದ್ದು, ಆಗ ಪಿರ್ಯಾದಿದಾರರ ಜೊತೆಯಲ್ಲಿದ್ದ ಹಿದಾಯತರವರು ಬಿಡಿಸಿದಾಗ ಆರೋಪಿಗಳು ನಿನ್ನನ್ನು ಮುಂದಕ್ಕೆ ಕೂಡಾ ಬಿಡುವುದಿಲ್ಲ ಎಂಬುದಾಗಿ ಬೆದರಿಕೆ ಹಾಕಿ ಬಂದ ಕಾರಿನಲ್ಲಿ ಹೋಗಿರುತ್ತಾರೆ ಎಂಬಿತ್ಯಾದಿ

Leave a Reply

Your email address will not be published. Required fields are marked *