Crime Reported in Moodabidre Police Station

ದಿನಾಂಕ 13-04-2019 ರಂದು ಪಿರ್ಯಾದಿದಾರರಾದ ಸಂದೀಪ್ ಹೆಗ್ಡೆಯವರ ಪರಿಚಯದ ಭಾಸ್ಕರ್ ಪೂಜಾರಿ, ಪ್ರಾಯ: 65 ವರ್ಷ ಎಂಬವರು  ಬೆಳುವಾಯಿ ಗ್ರಾಮದ ಬನ್ನಡ್ಕ ರಿಕ್ಷಾ ಪಾರ್ಕ್ ಬಳಿ ಬಂದು ಪಿರ್ಯಾದಿದಾರರೊಂದಿಗೆ ಮಾತನಾಡಿ  ರಾಘವೇಂದ್ರ ಮಠದ ಕಡೆಗೆ ಹೋಗಲು  ಸಂಜೆ ಸುಮಾರು 5-35 ಗಂಟೆಗೆ  ಮೂಡಬಿದ್ರೆ – ಕಾರ್ಕಳ ರಸ್ತೆಯನ್ನು  ಬನ್ನಡ್ಕ  ಆಟೋ ರಿಕ್ಷಾ ಪಾರ್ಕ ನ ಎದುರು ದಾಟುತ್ತಿದ್ದಾಗ ಮೂಡಬಿದ್ರೆ ಕಡೆಯಿಂದ ಕೆಎ-19-ಇವಿ-2536 ನೇ ಮೋಟಾರು ಸೈಕಲ್ ನ್ನು ಅದರ ಸವಾರ ಮೊಹಮ್ಮದ್ ಅವುಸಪ್ ಎಂಬವರು ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ  ಭಾಸ್ಕರ ಪೂಜಾರಿಯವರಿಗೆ ಡಿಕ್ಕಿ ಹೊಡೆದ ಪರಿಣಾಮ ಭಾಸ್ಕರ  ಪೂಜಾರಿಯವರಿಗೆ ಎಡಕಾಲಿಗೆ  ಗಂಭೀರ ಸ್ವರೂಪದ ರಕ್ತಗಾಯವಾಗಿರುವುದಲ್ಲದೇ ಕೈಗೆ, ಮುಖಕ್ಕೆ ತರಚಿದ ನಮೂನೆಯ ಗಾಯವಾಗಿದ್ದು, ಆರೋಪಿ ಮೋಟಾರು ಸೈಕಲ್ ಸವಾರನಿಗೆ ಮತ್ತು ಸಹಸವಾರನಿಗೂ ಈ ಅಪಘಾತದಿಂದ ತರಚಿದ ನಮೂನೆಯ ಗಾಯವಾಗಿರುತ್ತದೆ ಎಂಬಿತ್ಯಾದಿ.

 

Leave a Reply

Your email address will not be published. Required fields are marked *