Crime Reported in Moodabidre Police Station

ದಿನಾಂಕ 13-06-2018 ರಂದು ಬೆಳಿಗ್ಗೆ ಮೂಡಬಿದ್ರೆ ಪೊಲೀಸ್ ಠಾಣಾ ಪೊಲೀಸ್ ಉಪ ನಿರೀಕ್ಷಕನಾದ ದೇಜಪ್ಪ ರವರು ಹಗಲು ಠಾಣಾ ಸರಹದ್ದು ಗಸ್ತು ಸಂಚಾರದಲ್ಲಿರುತ್ತಾ ಬೆಳಿಗ್ಗೆ ಸುಮಾರು 10-30 ಗಂಟೆಯ ಸಮಯಕ್ಕೆ ಮಾರ್ಪಾಡಿ ಗ್ರಾಮದ ಮೂಡಬಿದ್ರೆ ಸಾರ್ವಜನಿಕ ಬಸ್ಸು ನಿಲ್ದಾಣದಲ್ಲಿ ಸಂಚರಿಸುತ್ತಿರುವಾಗ್ಯೆ ಬಸ್ಸು ನಿಲ್ದಾಣದಲ್ಲಿ ಮೂವರು ವ್ಯಕ್ತಿಗಳಾದ 1, ಮಹೇಶ್ ಪ್ರಾಯ 29 ವರ್ಷ 2, ಶೇಖರ ಪ್ರಾಯ 52 ವರ್ಷ 3, ನವೀನ್ ಫೆರ್ನಾಂಡಿಸ್ ಪ್ರಾಯ 35 ವರ್ಷ 4, ಶಶಿಧರ ಪ್ರಾಯ 53 ವರ್ಷ ಎಂಬುವರುಗಳು ಒಬ್ಬರಿಗೊಬ್ಬರು ದೂಡಾಡಿಕೊಂಡು ಬೈದಾಡಿಕೊಂಡು ಇದ್ದು ವಿಚಾರಿಸಿದಾಗ ಆಸಾಮಿಗಳು ಸ್ಥಳದಲ್ಲಿ ಮಂಗಳೂರು ಕಡೆಯಿಂದ ಬಂದ ರೇಶ್ಮ ಹೆಸರಿನ ವೇಗದೂತ ಬಸ್ಸು ನೊಂದಣಿ ಸಂಖ್ಯೆ – ಕೆಎ-19-ಎಎ-679 ನೇಯದ್ದು ಬೆಳಿಗ್ಗೆ 10-00 ಗಂಟೆಗೆ ಬಸ್ಸು ನಿಲ್ದಾಣದಿಂದ ಕಾರ್ಕಳ ಕಡೆಗೆ ತೆರಳಬೇಕಾಗಿದ್ದು ಆದರೆ ಬಸ್ಸು ಸಮಯಕ್ಕೆ ಸರಿಯಾಗಿ ತೆರಳದೇ ಇದ್ದು ಅಲ್ಲದೇ ಸದ್ರಿ ಬಸ್ಸಿನ ಮುಂಭಾಗದಲ್ಲಿ ಇದ್ದ ಮಂಗಳೂರಿನಿಂದ ಬಂದ ವಿಶಾಲ್ ಎಂಬ ಹೆಸರಿನ ಕೆಎ-19-ಸಿ-9167 ನೇ ನೋಂದಣಿ ಸಂಖ್ಯೆಯ ವೇಗದೂತ ಬಸ್ಸು ಬೆಳಿಗ್ಗೆ 9-50 ಗಂಟೆಗೆ ಕಾರ್ಕಳಕ್ಕೆ ತೆರಳಬೇಕಾಗಿದ್ದು ಎರಡೂ ಬಸ್ಸುಗಳು ನಿಗಧಿತ ವೇಳಾ ಪಟ್ಟಿಯಂತೆ ಬಸ್ಸುನಿಲ್ದಾಣದಿಂದ ತೆರಳದ ಕಾರಣ ಬಸ್ಸು ನೊಂದಣಿ ಸಂಖ್ಯೆ – ಕೆಎ-19-ಎಎ-679 ನೇಯದರ ನಿರ್ವಾಹಕ ಮೇಲ್ಕಂಡ ಹೆಸರು ವಿಳಾಸ ನಮೂದಿಸಿದ ಮಹೇಶ್ ಹಾಗೂ ಕೆಎ-19-ಸಿ-9167 ನೇ ನೋಂದಣಿ ಸಂಖ್ಯೆಯ ಬಸ್ಸಿನ ಎಜೆಂಟರುಗಳಾದ ಮೇಲ್ಕಂಡ ಶೇಖರ, ನವೀನ್ ಫೆರ್ನಾಂಡೀಸ್ ಮತ್ತು ಶಶಿಧರ ಎಂಬವರುಗಳು ಎರಡೂ ಬಸ್ಸುಗಳು ನಿಗಧಿತ ವೇಳಾಪಟ್ಟಿಯಂತೆ ಬಸ್ಸು ನಿಲ್ದಾಣದಿಂದ ತೆರಳದೇ ಇದ್ದ ಬಗ್ಗೆ ಒಬ್ಬರಿಗೊಬ್ಬರು ಸಾರ್ವಜನಿಕ ಸ್ಥಳದಲ್ಲಿ ಹೊಡೆದಾಡಿಕೊಂಡಿ ರುವುದರಿಂದ ಸದ್ರಿ ಆಪಾದಿತರುಗಳನ್ನು ಸ್ಥಳದಲ್ಲಿ ವಶಕ್ಕೆ ಪಡೆದು ಅವರುಗಳ ವಿರುದ್ದ ಪ್ರಕರಣ ದಾಖಲಿಸಿರುವುದು ಎಂಬಿತ್ಯಾದಿ

Leave a Reply

Your email address will not be published. Required fields are marked *