Crime Reported in Moodabidre Police Station

ದಿನಾಂಕ: 11-02-2018 ರಂದು ಮಂಗಳೂರು ತಾಲೂಕು ಮಾರ್ಪಾಡಿ ಗ್ರಾಮದ ಎಂ.ಸಿ.ಎಸ್ ಬ್ಯಾಂಕ್ ಬಳಿ ರಾ.ಹೆ ಯಲ್ಲಿ ಪಿರ್ಯಾದಿದಾರರು ಸಹ ಸವಾರರಾಗಿ ಕುಳಿತುಕೊಂಡು ಅವರ ಸ್ನೇಹಿತ ಮಹಮ್ಮದ್ ಶರೀಫ್ ಎಂಬವರು ಚಲಾಯಿಸುತ್ತಿದ್ದ ಮೋಟಾರು ಸೈಕಲ್ ನಂಬ್ರ ಕೆ.ಎ 19 ಈ.ಜಿ 1230 ನೇಯದಕ್ಕೆ ಆಟೋರಿಕ್ಷಾ ಚಾಲಕನು ಹಿಂಬದಿಯಿಂದ ಡಿಕ್ಕಿ ಮಾಡಿದ ಪರಿಣಾಮ ಪಿರ್ಯಾದಿದಾರರು ಮತ್ತು ಮೋಟಾರು ಸೈಕಲ್ ಸವಾರರು ರಸ್ತೆಗೆ ಬಿದ್ದು ಪಿರ್ಯಾದಿದಾರರ ಬಲ ಕಾಲ ಮೊಣಗಂಟಿಗೆ ರಕ್ತ ಗಾಯ, ಬಲ ಭುಜಕ್ಕೆ ಗುದ್ದಿದ ಗಾಯವಾಗಿದ್ದು ಮೋಟಾರು ಸೈಕಲ್ ಸವಾರ ಶರೀಫ್ ರವರ ಬಲ ಕೈ ತಟ್ಟಿಗೆ ಬಲ ಕೈ ಕೋಲು ಕೈಗೆ, ಬಲ ಹುಬ್ಬಿಗೆ , ಬಲ ಕೆನ್ನೆಗೆ, ತುಟಿಯ ಮೇಲ್ಬಾಗ ರಕ್ತಗಾಯವಾಗಿದ್ದು ಮೂಡಬಿದ್ರೆ ಆಳ್ವಾಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು , ಡಿಕ್ಕಿ ಮಾಡಿದ ಅಟೋರಿಕ್ಷಾವನ್ನು ಅದರ ಚಾಲಕನು ನಿಲ್ಲಿಸದೆ ಪರಾರಿಯಾಗಿರುತ್ತಾರೆ ಸದ್ರಿ ಪ್ರಕರಣ ದಾಖಲಿಸಿ ತನಿಖೆ ಕೈಗೋಳ್ಳಲಾಗಿದೆ.

Leave a Reply

Your email address will not be published. Required fields are marked *