Crime Reported in Mangaluru South Police Station

ಪಿರ್ಯಾದಿ Maruthi Yallappa Madar ರವರು ಸುಮಾರು 20 ವರ್ಷಗಳಿಂದ ಕೇರಳದ ಚೆರ್ವತ್ತೂರಿನಲ್ಲಿ ಲಾರಿಗಳಿಗೆ ಕೆಂಪು ಕಲ್ಲುಗಳನ್ನು ಲೋಡ್ ಮಾಡುವ ಕೆಲಸ ಮಾಡುತ್ತಿದ್ದು, ಎಂದಿನಂತೆ ಕೆಲಸ ಮುಗಿಸಿ ದಿನಾಂಕ 12-06-2018 ರಂದು ತನ್ನ ಸ್ವಂತ ಊರಾದ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಚಿಕ್ಕೊಪ್ಪಕ್ಕೆ ಹೋಗಲು ಬಟ್ಟೆ ಹಾಗೂ 3 ಲೀಟರ್ ಕೊಬ್ಬರಿ ಎಣ್ಣೆಯನ್ನು ತೆಗೆದುಕೊಂಡು ಕೇರಳದ ಚೆರ್ವತ್ತೂರಿನಿಂದ 04-30 ಗಂಟೆಗೆ ರೈಲಿನಲ್ಲಿ ಹೊರಟವರು ಮಂಗಳೂರು ಸೆಂಟ್ರಲ್ ರೇಲ್ವೆ ಸ್ಟೇಷನ್ ಗೆ ರಾತ್ರಿ 08-00 ಗಂಟೆ ಸುಮಾರಿಗೆ ಬಂದು, ರೈಲ್ವೇ ಸ್ಟೇಷನ್ ನಿಂದ ಮಂಗಳೂರು ಸರ್ವಿಸ್ ಬಸ್ ನಿಲ್ದಾಣದ ಕಡೆಗೆ ನಡೆದುಕೊಂಡು ಮುಖ್ಯರಸ್ತೆ ದಾಟಿ ಪುರಭವನ ಹಾಗೂ ಗಾಂಧಿ ಪಾರ್ಕನ ನಡುವಿನ ಕಾಲುದಾರಿಯ ಮಟ್ಟಿಲುಗಳ ಕೆಳಗಡೆ ನಿಂತುಕೊಂಡು, ತನಗೆ ಬಸ್ಸಿಗೆ ಹೋಗಲು ಬೇಕಾಗುವಷ್ಟು ಹಣ ತೆಗೆಯಲು ಪಿರ್ಯಾದಿದಾರರು ತಮ್ಮ ಒಳ ಚಡ್ಡಿಯ ಕಿಸೆಯಲ್ಲಿ ಇಟ್ಟಿದ್ದ ಹಣವನ್ನು ತೆಗೆದು ಲೆಕ್ಕ ಮಾಡುತ್ತಿರುವ ಸಮಯ ರಾತ್ರಿ ಸುಮಾರು 8-30 ಗಂಟೆಗೆ ನಾಲ್ಕು ಜನ ಅಪರಿಚತ ಯುವಕರು ಪಿರ್ಯಾದಿದಾರರನ್ನು ಸುತ್ತವರಿದರು. ಹಣವನ್ನು ಹಾಗೂ ಪಿರ್ಯಾದಿದಾರರಲ್ಲಿದ್ದ ಸೊತ್ತುಗಳನ್ನು ದೋಚಿಕೊಂಡು ಹೋಗುವ ಉದ್ದೇಶದಿಂದ ನಾಲ್ಕು ಜನರ ಪೈಕಿ ಒಬ್ಬಾತನು ಪಿರ್ಯಾದಿದಾರರನ್ನು ಗಟ್ಟಿಯಾಗಿ ಹಿಡಿದುಕೊಂಡು, ಮತ್ತೊಬ್ಬ ಕೈಯ ಉಗುರಿನಲ್ಲಿ ಏನೋ ಇಟ್ಟುಕೊಂಡು ಪಿರ್ಯಾದಿದಾರರ ಕುತ್ತಿಗೆಯ ಬಳಿ ಹಿಡಿದು ಹೆದರಿಸಿ, ಇನ್ನೋರ್ವ ಬಲತ್ಕಾರವಾಗಿ ಪಿರ್ಯಾದಿದಾರರ ಕೈಯಲ್ಲಿದ್ದ 4000/- ಹಣವನ್ನು ಹಾಗೂ ಮತ್ತೊಬ್ಬ ಕೊಬ್ಬರಿ ಎಣ್ಣೆ ಮತ್ತು ಬಟ್ಟೆಗಳಿದ್ದ ಬ್ಯಾಗನ್ನು ಎಳೆದುಕೊಂಡು ನಾಲ್ಕು ಜನರು ಆಟೋದಲ್ಲಿ ಓಡಿ ಹೋಗಿರುತ್ತಾರೆ. ಸುಲಿಗೆ ಮಾಡಿಕೊಂಡ ಹೋದ ಯುವಕರು ಸುಮಾರು 25 ರಿಂದ 30 ವರ್ಷದ ವಯಸ್ಸಿನವರಾಗಿದ್ದು, ಪ್ಯಾಂಟ್ ಮತ್ತು ಶರ್ಟನ್ನು ಧರಿಸಿರುತ್ತಾರೆ. ಪಿರ್ಯಾದಿದಾರರ ಬ್ಯಾಗ್ ಮತ್ತು ಕೊಬ್ಬರಿ ಎಣ್ಣೆಯ ಮೌಲ್ಯ ಸುಮಾರು 800/- ರೂಪಾಯಿ ಆಗಬಹುದು. ಸುಲಿಗೆ ಮಾಡಿದ ಒಟ್ಟು ಹಣ 4800/- ಆಗಿರುತ್ತದೆ. ಎಂಬಿತ್ಯಾದಿ

Leave a Reply

Your email address will not be published. Required fields are marked *