Crime Reported in Mangaluru North Police Station

ಪಿರ್ಯಾದಿದಾರರಾದ ಶ್ರೀ ಚಾರ್ಲ್ಸ್ ಡಿ’ಸೋಜಾ ರವರು ಮಂಗಳೂರಿನ ಬಾವುಟಗುಡ್ಡೆಯ ಬಳಿ ಇರುವ ನ್ಯಾಯಾಲಯದಲ್ಲಿ ವಕೀಲರೊಂದಿಗೆ ಕ್ಲರ್ಕ್ ಕೆಲಸ ಮಾಡಿಕೊಂಡಿದ್ದು, ದಿನಾಂಕ 16-06-2017 ರಂದು ತನ್ನ KA-19-EC- 9150 ನೇ ನಂಬ್ರದ ಹೀರೋ ಹೋಂಡಾ ಸ್ಪ್ಲೆಂಡರ್ ಮೋಟಾರು ಸೈಕಲಿನಲ್ಲಿ ತನ್ನ ಕೆಲಸಕ್ಕೆ ಬಂದು ಬೈಕನ್ನು ನ್ಯಾಯಾಲಯ ಕಟ್ಟಡದ ತಳಮಹಡಿಯಲ್ಲಿರುವ ಪಾರ್ಕಿಂಗ್ ಸ್ಥಳದಲ್ಲಿ 10-45 ಗಂಟೆಗೆ ಪಾರ್ಕ್ ಮಾಡಿ ಕೆಲಸದ ಪ್ರಯುಕ್ತ ಹೋಗಿ ನಂತರ ಕೆಲಸ ಮುಗಿಸಿ ವಾಪಾಸು ಮಧ್ಯಾಹ್ನ 12-10 ಗಂಟೆಗೆ ತಾನು ಬೈಕ್ ನಿಲ್ಲಿಸಿದ್ದ ಸ್ಥಳಕ್ಕೆ ಬಂದು ನೋಡಿದಾಗ ಬೈಕ್ ಇರಲಿಲ್ಲ, ಅಕ್ಕ ಪಕ್ಕದಲ್ಲಿ ಹುಡುಕಾಡಿ ತನ್ನ ಸ್ನೇಹಿತ ಕಿಶೋರ್ ಕುಂದರ್ ರವರಿಗೆ ವಿಷಯ ತಿಳಿಸಿ ಅವರು ಕೂಡಾ ಬಂದು ಈರ್ವರೂ ಹುಡುಕಾಡಿದಲ್ಲಿ ಸಿಕ್ಕಿರುವುದಿಲ್ಲ. ಬೈಕ್ ಸಿಗಬಹುದೆಂಬ ನಿರೀಕ್ಷೆಯಿಂದ, ಎಲ್ಲಾ ಕಡೆಗಳಲ್ಲಿ ಹುಡುಕಾಡಿ ಸಿಗದೇ ಇದ್ದುದರಿಂದ ಆ ಬೈಕನ್ನು ಇಟ್ಟಿದ್ದ ಸ್ಥಳದಿಂದ ಯಾರೋ ಕಳ್ಳರು ದಿನಾಂಕ 16-06-2017 ರಂದು ಬೆಳಿಗ್ಗೆ 10-45 ರಿಂದ ಮದ್ಯಾಹ್ನ 12-10 ಗಂಟೆಯ ಮಧ್ಯೆ ಕಳವು ಮಾಡಿಕೊಂಡು ಹೋಗಿದ್ದು ಕಳವಾದ ವಾಹನದ ವಿವರ ಈ ರೀತಿ ಇದೆ.: Reg No. KA-19-EC- 9150 ನೇ ನಂಬ್ರದ ಹೀರೋ ಹೋಂಡಾ ಸ್ಪ್ಲೆಂಡರ್ ಮೋಟಾರು ಸೈಕಲ್, ಇಂಜಿನ್ ನಂಬ್ರ HA10EFBHD52200, ಚಾಸೀಸ್ ನಂಬ್ರ MBLHA10EYBHD30702, ಮಾದರಿ 2011, ಬಣ್ಣ: BLACK, ಅಂದಾಜು ಬೆಲೆ ರೂ. 26,000/- ಆಗಬಹುದು.

Leave a Reply

Your email address will not be published. Required fields are marked *