Crime Reported in Mangalore Traffic West Police Station

ದಿನಾಂಕ 11-04-2019 ರಂದು ಫಿರ್ಯಾದುದಾರರು ಮಂಗಳೂರು ನಗರದ ತನ್ನ ಮನೆಯಿಂದ ಬೋಳೂರು ಕಡೆಗೆ ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಾ ಸಮಯ ಸುಮಾರು ಬೆಳಿಗ್ಗೆ 5-30 ಗಂಟೆಗೆ ಬೋಳೂರು ಅಕ್ಷಯ ಹಾಲ್ ಎದುರುಗಡೆ ತಲುಪಿದಾಗ ಬೊಕ್ಕಪಟ್ನ ಕಡೆಯಿಂದ ಬೋಳೂರು ಕಡೆಗೆ KA-19-MF-5584 ನೇ ಓಮ್ನಿ ಕಾರನ್ನು ಅದರ ಚಾಲಕ ಏಕನಾಥ ಭಟ್ ರವರು ಸಾರ್ವಜನಿಕ ರಸ್ತೆಯಲ್ಲಿ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಫಿರ್ಯಾದುದಾರರಿಗೆ ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದುದರಿಂದ ಎಡ ಭುಜಕ್ಕೆ ಬಲವಾದ ಗುದ್ದಿದ ನಮೂನೆಯ ಗಾಯ, ಎಡ ಕೈ ಮತ್ತು ಎಡ ಕಾಲಿನ ಗಂಟಿಗೆ ತರಚಿದ ರಕ್ತಗಾಯವಾಗಿರುತ್ತದೆ. ಗಾಯಗೊಂಡವರನ್ನು ಫಿರ್ಯಾದುದಾರರ ಅಣ್ಣ ಬಿ ತ್ಯಾಂಪಣ್ಣ ಶೆಟ್ಟಿ ರವರು ಉಪಚರಿಸಿ ಚಿಕಿತ್ಸೆ ಬಗ್ಗೆ ಅದೇ ಕಾರಿನಲ್ಲಿ ಯೇನಪೋಯ ಆಸ್ಪತ್ರೆಗೆ ತಂದು ದಾಖಲಿಸಿರುತ್ತಾರೆ

Leave a Reply

Your email address will not be published. Required fields are marked *