Crime Reported in Mangalore Traffic West Police Station

ದಿನಾಂಕ 08-02-2019 ರಂದು ಪಿರ್ಯಾದುದಾರರ ಸ್ನೇಹಿತೆ ಶ್ರೀಮತಿ ಅನ್ನಪೂರ್ಣ ರವರು ಅವರ ಬಾಬ್ತು ದ್ವಿಚಕ್ರ ವಾಹನ ನಂಬ್ರ KA-19-EE-2761 ನೇದನ್ನು ಮಂಗಳೂರು ನಗರದ ಹ್ಯಾಟ್ ಹಿಲ್ ಕಡೆಯಿಂದ ಕೂಳೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ಸಮಯ ಸುಮಾರು ಸಂಜೆ 6-00 ಗಂಟೆಗೆ ಕರಾವಳಿ ಉತ್ಸವ ಮೈದಾನದ ಎದುರುಗಡೆಯ ರಸ್ತೆ ವಿಭಾಜಕದ ಮೀಡಿಯನ್ ಬಳಿ ದ್ವಿ ಚಕ್ರ ವಾಹನವನ್ನು ನಿಲ್ಲಿಸಿ ಅಲ್ಲಿಂದ ಬಲಕ್ಕೆ ಹೋಗುವರೇ ಲಾಲ್ ಬಾಗ್ – ಲೇಡಿಹಿಲ್ ಕಡೆಯ ರಸ್ತೆಯಲ್ಲಿ ಹೋಗುತ್ತಿದ್ದ ವಾಹನಗಳಿಗೆ ಹೋಗುವರೇ ಅನುವು ಮಾಡಿಕೊಂಡು ಕಾಯುತ್ತಿದ್ದ ಸಮಯ ಆರೋಪಿತ ಮೊಹಮ್ಮದ್ ಮಾಶೂಕ್ ರವರು ಮೋಟಾರು ಸೈಕಲ್ ನಂಬ್ರ KA-21-S-5434 ನೇದನ್ನು ಲೇಡಿಹಿಲ್ ಕಡೆಯಿಂದ ಲಾಲ್ ಬಾಗ್ ಕಡೆಗೆ ಸಾರ್ವಜನಿಕ ರಸ್ತೆಯಲ್ಲಿ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಅನ್ನಪೂರ್ಣ ರವರ ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದುದರಿಂದ ರಸ್ತೆಗೆ ಬಿದ್ದ ಅಣ್ಣಪೂರ್ಣ ರವರ ಬಲಕೈಯ ಬೆರಳುಗಳಿಗೆ ರಕ್ತಗಾಯ ಹಾಗೂ ಬಲಕಾಲಿನ ಕೋಲು ಕಾಲಿನಲ್ಲಿ ಮೂಳೆ ಮುರಿತದ ಗಂಭಿರ ಸ್ವರೂಪದ ಗಾಯಗೊಂಡವರನ್ನು ಫಿರ್ಯಾದುದಾರರು ಚಿಕಿತ್ಸೆ ಬಗ್ಗೆ ನಗರದ SCS ಆಸ್ಪತ್ರೆಗೆ ದಾಖಲಿಸಿರುವುದಾಗಿದೆ. ಈ ಅಫಘಾತದಿಂದ ಆರೋಪಿತನಿಗೂ ಸಣ್ಣಪುಟ್ಟ ಗಾಯಗಳಾಗಿರುತ್ತದೆ. ಸದರಿ ಅಫಘಾತದಿಂದ ಉಂಟಾದ ಗಾಯವು ಸಣ್ಣ ಪ್ರಮಾಣದೆಂದು ಭಾವಿಸಿದ್ದು, ಬಳಿಕ ಗಾಯವು ಮೂಳೆ ಮುರಿತದ ಗಾಯವೆಂದು ತಿಳಿದು ಬಂದಿರುವುದರಿಂದ ತಡವಾಗಿ ದೂರು ನೀಡಿರುವುದಾಗಿದೆ.

Leave a Reply

Your email address will not be published. Required fields are marked *