Crime Reported in Mangalore Traffic West Police Station

ದಿನಾಂಕ 13-01-2019 ರಂದು 23.30 ಘಂಟೆಗೆ ಪಿರ್ಯಾದುದಾರರು ಹಾಗೂ ತಮ್ಮ ಸಹವ್ಯಾಪಾರಿಗಳಾದ ಸಣ್ಣಪ್ಪ(35) ಮತ್ತು ರಾಜೇಶ (28) ರವರ ಜೋತೆ ಮಂಗಳೂರು ನಗರದ ಕೆಎಸ್ಆರ್ಟಿ ಪೂಟ್ಪಾತ್ ನಲ್ಲಿ ಹೂ ವ್ಯಾಪಾರ ಮಾಡಿಕೊಂಡು ಮನೆಗೆ ತೆರಳುವ ಸಮಯ ಕೆಎಸ್ಆರ್ ಟಿಸಿ ಬಸ್ಸ್ ನಿಲ್ದಾಣದ ಕಡೆಯಿಂದ ಲಾಲ್ಭಾಗ್ ಕಡೆಗೆ KL 60 G 437 ನೇದರ ಚಾಲಕನು ಅತೀ ವೇಗ ಹಾಗೂ ಅಜಾಗರೂಕತೆಯಿಂದ ಪೂಟ್ಪಾತ್ ಮೇಲೆ ಚಲಾಯಿಸಿಕೊಂಡು ಬಂದು ಸಣ್ಣಪ್ಪ ಮತ್ತು ರಾಜೇಶ್ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಸಣ್ಣಪ್ಪ ನಿಗೆ ಬಲಕಾಲಿನ ಮೊಣಕಾಲು, ಬಲಕೈ ಗೆ ಹಾಗೂ ತಲೆಗೆ ಪೆಟ್ಟುಬಿದ್ದ ಕಾರಣ ಮೂಗು ನಲ್ಲಿ ರಕ್ತ ಸ್ರಾವ ಉಂಟಾಗಿರುತ್ತದೆ. ರಾಜೇಶರವರಿಗೆ ಲಿವರ್ ಮತ್ತು ಕಿಡ್ನಿಗೆ ತೀವ್ರ ಸ್ವರೂಪದ ಪೆಟ್ಟುಬಿದ್ದ ಕಾರಣ ಪಿರ್ಯಾದುದಾರರು ಸಣ್ಣಪ್ಪ ಹಾಗೂ ರಾಜೇಶ ಎಂಬುವವರನ್ನು ಚಿಕಿತ್ಸೆಯ ಬಗ್ಗೆ ನಗರದ ಖಾಸಗಿ ಆಸ್ಪತ್ರೆಯಾದ ಎ.ಜೆ ಆಸ್ಪತ್ರೆಯಲ್ಲಿ ಹಾಜರುಪಡಿಸಿದ್ದು, ಪರೀಕ್ಷಿಸಿದ ವೈದ್ಯರು ಒಳರೋಗಿಯಾಗಿ ದಾಖಲಿಸಿರುವುದಾಗಿದೆ

Leave a Reply

Your email address will not be published. Required fields are marked *