Crime Reported in Mangalore Traffic West Police Station

ದಿನಾಂಕ 03-12-2018 ರಂದು ಫಿರ್ಯಾದುದಾರರ ತಂದೆಯವರಾದ ಹಸನಬ್ಬ ರವರು ರೊಸಾರಿಯೋ ದಿಂದ ಸ್ಟೇಟ್ ಬ್ಯಾಂಕ್ ಕಡೆಗೆ ನಡೆದುಕೊಂಡು ಬರುತ್ತಾ ಸಮಯ ಸುಮಾರು ಬೆಳಿಗ್ಗೆ 9-15 ಗಂಟೆಗೆ ಮಂಗಳೂರು ನಗರದ ಸ್ಟೇಟ್ ಬ್ಯಾಂಕ್ ಬಳಿಯ ಪೊಲೀಸ್ ತರಭೇತಿ ಶಾಲೆಯವಸತಿ ಗೃಹದ ಕಟ್ಟಡದ ಎದುರುಗಡೆ ತಲುಪಿದಾಗ ರಸ್ತೆಯ ಬಲ ಬದಿಯಲ್ಲಿ ನಿಲ್ಲಿಸಿದ್ದ KL-14-E-5656 ನೇ ಕಾರನ್ನು ಅದರ ಚಾಲಕನು ಯಾವುದೇ ಸೂಚನೆಯನ್ನು ನೀಡದೇ ನಿಲ್ಲಿಸಿದ್ದಲ್ಲಿಂದ ಸಾರ್ವಜನಿಕ ರಸ್ತೆಯ ಕಡೆಗೆ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ಒಮ್ಮೆಲೆ ಹಿಂದಕ್ಕೆ ಚಲಾಯಿಸಿ ಢಿಕ್ಕಿ ಹೊಡೆದ ಪರಿಣಾಮ ರಸ್ತೆಗೆ ಬಿದ್ದ ಹಸನಬ್ಬರವರ ಎರಡೂ ಕಾಲಿನ ಮೇಲೆ ಕಾರಿನ ಚಕ್ರವು ಹಾದು ಹೋಗಿದ್ದುದರಿಂದ ಗಂಭೀರ ಸ್ವರೂಪದ ಗಾಯಗೊಂಡವರನ್ನು ಸದರಿ ಕಾರಿನ ಚಾಲಕ ಹಾಗೂ ಫಿರ್ಯಾದುದಾರರು ಚಿಕಿತ್ಸೆ ಬಗ್ಗೆ MV Shetty ಆಸ್ಪತ್ರೆಗೆ ಕರೆದುಕೊಂಡು ಹೋಗಿ ಅಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆ ಬಗ್ಗೆ ಹೈಲ್ಯಾಂಡ್ ಆಸ್ಪತ್ರೆಗೆ ತಂದು ದಾಖಲಿಸಿರುತ್ತಾರೆ. ಕಾರಿನ ಚಾಲಕ ಚಿಕಿತ್ಸೆಯ ಸಂಪೂರ್ಣ ವೆಚ್ಚವನ್ನು ನೀಡುವುದಾಗಿ ತಿಳಿಸಿ ಈಗ ನೀಡಲು ನಿರಾಕರಿಸಿರುವುದರಿಂದ ದೂರು ನೀಡಲು ವಿಳಂಭವಾಗಿರುತ್ತದೆ ಎಂಬಿತ್ಯಾದಿ.

Leave a Reply

Your email address will not be published. Required fields are marked *