Crime Reported in Mangalore Traffic West Police Station

ದಿನಾಂಕ 09-05-2018 ರಂದು ಪಿರ್ಯಾದುದಾರರು ತಮ್ಮ ಬಾಬ್ತು KA-19-EU-6684 ನೇ ದ್ವಿ ಚಕ್ರ ವಾಹನದಲ್ಲಿ ಸಹ ಸವಾರನಾಗಿ ಹಾಗೂ ತನ್ನ ಅಣ್ಣನಾದ ಮಹಮ್ಮದ್ ಮನ್ಸೂರ್ ರವರು ದ್ವಿ ಚಕ್ರ ವಾಹನವನ್ನು ಮಂಗಳೂರು ನಗರದ ರಾವ್ & ರಾವ್ ವೃತ್ತದಿಂದ ಹಂಪನ್ ಕಟ್ಟೆ ಕಡೆಗೆ ಚಲಾಯಿಸಿಕೊಂಡು ಬರುತ್ತಾ ಸಮಯ ಸುಮಾರು ಮದ್ಯಾಹ್ನ 3-30 ಗಂಟೆಗೆ ಲೇಡಿಗೋಶನ್ ಬಳಿಯ ಪುರಭವನದ ಕಂಪೌಂಡ್ ಎದುರಿಗೆ ತಲುಪಿದಾಗ ರಸ್ತೆ ಬದಿಯಲ್ಲಿ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿದ್ದ KL-14-T-8612 ನೇ ಕಾರನ್ನು ಅದರ ಚಾಲಕನು ಯಾವುದೇ ಸೂಚನೆಯನ್ನು ನೀಡದೇ ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾಗುವ ರೀತಿಯಲ್ಲಿ ಒಮ್ಮೆಲೆ ಪ್ರಧಾನ ರಸ್ತೆಯ ಕಡೆಗೆ ಚಲಾಯಿಸಿ KA-19-EU-6684 ನೇ ದ್ವಿ ಚಕ್ರ ವಾಹನಕ್ಕೆ ಢಿಕ್ಕಿ ಹೊಡೆದ ಪರಿಣಾಮ ವಾಹನ ಸಮೇತ ರಸ್ತೆಗೆ ಬಿದ್ದುದರಿಂದ ಫಿರ್ಯಾದುದಾರರಿಗೆ ಗುದ್ದಿದ ನಮೂನೆಯ ಸಾಧಾ ಸ್ವರೂಪದ ಗಾಯವಾಗಿದ್ದು, ಫಿರ್ಯಾದುದಾರರ ಅಣ್ಣ ಮಹಮ್ಮದ್ ಮನ್ಸೂರ್ ರವರಿಗೆ ಬಲ ಕೈಯಲ್ಲಿ ಮೂಳೆ ಮುರಿತದ ಗಾಯವಾಗಿರುತ್ತದೆ. ಈ ಬಗ್ಗೆ ಚಿಕಿತ್ಸೆಗೆ ಕೆಎಂಸಿ ಆಸ್ಪತ್ರೆಗೆ ಕರೆತಂದಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಯ ಬಗ್ಗೆ ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ರಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *