Crime Reported in Mangalore Traffic South Police Station

ಪಿರ್ಯಾದಿದಾರರು ದಿನಾಂಕ 13-09-2018 ರಂದು ಅವರ ಮನೆಯಾದ ಕಣ್ಣೂರಿಗೆ ಹೋಗಲು ಪಂಪವೆಲ್ ಬಸ್ಸು ನಿಲ್ದಾಣದ ಬಳಿ ಬಸ್ಸಿಗಾಗಿ ಕಾಯುತ್ತಿರುವ ಸಮಯ ಸುಮಾರು 20.40 ಗಂಟೆಗೆ ನಾಗೂರಿ ಕಡೆಯಿಂದ ಪಂಪವೆಲ್ ಕಡೆಗೆ ಆಟೋ ರೀಕ್ಷಾ ನಂಬ್ರ KA-19-AA-2460 ನೇದರ ಚಾಲಕ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಆಟೋ ರೀಕ್ಷಾವನ್ನು ಚಲಾಯಿಸಿಕೊಂಡು ಬಂದು ಪಂಪವೆಲ್ ಮಥುರಾ ಹೋಟೆಲ್ ಮುಂಭಾಗ ರಸ್ತೆ ಬದಿ ರಸ್ತೆ ದಾಟಲು ನಿಂತಿದ್ದ ವ್ಯಕ್ತಿಯೊಬ್ಬರಿಗೆ ಡಿಕ್ಕಿ ಹೊಡೆದ ಪರಿಣಾಮ ಆ ವ್ಯಕ್ತಿ ರಸ್ತೆಗೆ ಬಿದ್ದು ಆತನನ್ನು ಪಿರ್ಯಾದಿದಾರರು ಮತ್ತು ಸಾರ್ವಜನಿಕರು ಉಪಚರಿಸಿ ಪಿರ್ಯಾದಿದಾರರು ಅಲ್ಲಿ ಸೇರಿದವರಲ್ಲಿ ಆತನ ಹೆಸರು ವಿಚಾರಿಸಲಾಗಿ ಮಹೇಶ ಎಂಬುದಾಗಿ ತಿಳಿದುಕೊಂಡು ನಂತರ ಚಿಕಿತ್ಸೆಗಾಗಿ 108 ಅಂಬುಲೆನ್ಸ್ ವೊಂದರಲ್ಲಿ ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಕರೆದುಕೊಂಡು ಹೋಗಿ ಅಲ್ಲಿನ ವೈದ್ಯರು ಆ ವ್ಯಕ್ತಿಯನ್ನು ಪರೀಕ್ಷಿಸಿ ಗಾಯಾಳು ಮಹೇಶನ ತಲೆಯ ಹಿಂಭಾಗಕ್ಕೆ ತರಚಿದ ಗಾಯ ಹಾಗೂ ತಲೆಗೆ ತೀವ್ರ ತರದ ಗುದ್ದಿದ ಗಾಯ ಹಾಗೂ ಮೈ ಕೈಗೆ ಸಣ್ಣ ಪುಟ್ಟ ತರಚಿದ ಗಾಯವಾಗಿ ಮಾತನಾಡುವ ಸ್ಥಿತಿಯಲ್ಲಿರುವುದಿಲ್ಲ ಎಂದು ತಿಳಿಸಿರುತ್ತಾರೆ

Leave a Reply

Your email address will not be published. Required fields are marked *