Crime Reported in Mangalore Traffic South Police Station

ಪಿರ್ಯಾದಿದಾರರ ಭಾವನಾದ  ರಾಬರ್ಟ ರವರು ನಿನ್ನೆ ದಿನ ದಿನಾಂಕ 11/01/2018  ರಂದು ಸ್ವಂತ ಕೆಲಸದ ನಿಮಿತ್ತ ಮಂಗಳೂರಿಗೆ ಹೋಗಿ ಕೆಲಸ ಮುಗಿಸಿಕೊಂಡು ಮನೆಯಾದ ಆಡಂ ಕುದ್ರುಗೆ ಬಸ್ಸಿನಲ್ಲಿ  ಬಂದು  ಇಳಿದು ಮನೆಯ ಕಡೆ ಹೋಗಲು ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ದಾಟಲು ಮಂಗಳೂರು ಕಡೆಯಿಂದ ಕಾಸರಗೋಡು ಕಡೆಗೆ KL-59-K-8235 ನೇ ಕಾರಿನ ಚಾಲಕನು ಅಜಾಗರೂಕತೆ, ನಿರ್ಲಕ್ಷ್ಯತನ ಹಾಗೂ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಭಾವನಾದ  ರಾಬರ್ಟ ರವರಿಗೆ ಡಿಕ್ಕಿ ಹೊಡೆದ ಪರಿಣಾಮ ಡಾಂಬಾರು ರಸ್ತೆಗೆ ಬಿದ್ದು ಎಡ ಭುಜಕ್ಕೆ ಮತ್ತು ಮೂಗಿಗೆ ಮೂಳೆ ಮುರಿತದ ಗಾಯ ಹಾಗೂ ಎಡ ಕೊಲು  ಕಾಲಿಗೆ  ಮತ್ತು ತಲೆಗೆ ರಕ್ತ ಗಾಯವಾಗಿದ್ದು ಹಾಗೂ ಸೊಂಟದ ಭಾಗಕ್ಕೆ ತೀವ್ರ ತರದ ಗುದ್ದಿದ ಗಾಯ ವಾಗಿರುತ್ತದೆ. ಪ್ರಥಮ ಚಿಕಿತ್ಸೆಗಾಗಿ ತೊಕ್ಕೊಟ್ಟು ನೇತಾಜಿ ಯೆಲ್ಲಪ್ಪ ಆಸ್ಪತ್ರೆಗೆ ಕೊಂಡು ಹೋಗಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ವೈದ್ಯರು ಪರೀಕ್ಷಿಸಿ ಒಳ ರೋಗಿಯಾಗಿ ದಾಖಲು ಮಾಡಿರುತ್ತಾರೆ. ಸದ್ರಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *