Crime Reported in Mangalore Traffic South Police Station

ಪಿರ್ಯಾದಿದಾರರಾದ ದಿನೇಶರವರು ನಿನ್ನೆ ದಿನ ದಿನಾಂಕ :11/04/2019 ರಂದು ಅಜ್ಜಾವರದಿಂದ ಮಂಗಳೂರಿಗೆ ಬಸ್ ತೊಳೆಯುವ ಕೆಲಸಕ್ಕೆಂದು ಬಿಸಿ ರೋಡ್ ಗೆ ಬಂದು ಇಳಿದು ನಂತರ ಅಲ್ಲಿಂದ ಬಸ್ಸು ನಂಬ್ರ KA-19-AB 5989 ನೇದರಲ್ಲಿ ಪ್ರಯಾಣಿಕರಾಗಿ ಬರುತ್ತಿರುವಾಗ ಪಿರ್ಯಾದಿದಾರರು ಪ್ರಯಾಣಿಸುತ್ತಿದ್ದ ಬಸ್ ಅಳಪೆ ಬಳಿಯ ಅಮರ್ ಆಳ್ವ ಬಸ್ ಸ್ಠಾಂಡ್ ಹತ್ತಿರ ತಲುಪಿದಾಗ ಸಮಯ ಸುಮಾರು 19:15 ಗಂಟೆಗೆ ರಸ್ತೆ ದಾಟುತ್ತಿದ್ದ ಅಪರಿಚಿತ ಗಂಡಸಿಗೆ ಡಿಕ್ಕಿಯಾಯಿತು ಪರಿಣಾಮ ಅಪರಿಚಿತ ಗಂಡಸು ಡಾಂಬರು ರಸ್ತೆಗೆ ಬಿದ್ದನು ತಕ್ಷಣ ಬಸ್ ಡ್ರೈವರ್ ಮತ್ತು ಅಲ್ಲಿ ಸೇರಿದ ಸಾರ್ವಜನಿಕರು ಸೇರಿ ಒಂದು ಅಟೊ ರಿಕ್ಷಾದಲ್ಲಿ ಕಂಕನಾಡಿಯ ಪಾದರ್ ಮುಲ್ಲರ್ ಆಸ್ಪತ್ರೆಗೆ ಕರೆದುಕೋಂಡು ಹೋದರು ಅಲ್ಲಿನ ವೈದ್ಯರು ಪರಿಕ್ಷೀಸಿ ಇವರಿಗೆ ತಕ್ಷಣ ಸ್ಕಾನಿಂಗ್ ಮಾಡಿಸಿಬೆಕೆಂದು ತಿಳಿಸಿದಾಗ ಬಸ್ ಡ್ರೈವರ್ ಆದ ಮೋಹನರವರು ನನ್ನ ಬಳಿ ಅಷ್ಟೋಂದು ಹಣ ಇಲ್ಲವೆಂದು  ಇವರನ್ನು ವೆನ್ ಲಾಕ್ ಆಸ್ಪತ್ರೆಗೆ ಕರೆದುಕೊಂಡು ಹೊಗುತ್ತೆನೆ ಎಂದು ತಿಳಿಸಿರುತ್ತಾರೆ ಅಲ್ಲಿಂದ ಖಾಸಗಿ ಆಂಬ್ಯುಲೆನ್ಸ್ ನಲ್ಲಿ ವೆನ್ ಲಾಕ್ ಅಸ್ಪತ್ರೆಗೆ ಕರೆದುಕೊಂಡು ಬಂದು ಅಲ್ಲಿನ ವೈದ್ಯರು ಪರಿಕ್ಷಿಸಿ ಈ ವ್ಯಕ್ತಿಯು ಸಮಯ 23;30 ಗಂಟೆಗೆ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ ಈ ಅಪಘಾತಕ್ಕೆ KA-19-AB 5989 ನೇದರ ಚಾಲಕ ಮೋಹನರವರ ದುಡುಕುತನ ಹಾಗೂ ನಿರ್ಲಕ್ಷ್ಯತನದ ಚಾಲನೆಯೆ ಕಾರಣವಾಗಿರುತ್ತದೆ

Leave a Reply

Your email address will not be published. Required fields are marked *