Crime Reported in Bajpe Police Station

ದಿನಾಂಕ 16-12-2018 ರಂದು ರಾತ್ರಿ 7.00 ಗಂಟೆಗೆ ಪಿರ್ಯಾದಿದಾರರ ತಮ್ಮ ಸತೀಶ್ ಆಚಾರ್ಯರವರು ತನ್ನ ಬಾಬ್ತು ಕೆಎ-19-ಇಹೆಚ್-8461 ನೇದರಲ್ಲಿ ಮುಚ್ಚೂರು ಕಡೆಯಿಂದ ಗಂಜಿಮಠ ಕಡೆಗೆ ಬರುತ್ತಾ ಕೊಂಪದವು ಗ್ರಾಮದ ಕಲ್ಲಡ್ಪು ಕಾಪಿಕಾಡು ಎಂಬಲ್ಲಿಗೆ ತಲುಪುತ್ತಿದ್ದಂತೆ ಎದುರಿನಿಂದ ಅಂದರೆ ಗಂಜಿಮಠ ಕಡೆಯಿಂದ ಮುಚ್ಚೂರು ಕಡೆಗೆ ಕೆಎ-19-ಇಬಿ-8022 ನೇದನ್ನು ಅದರ ಸವಾರ ಸಹಸವಾರರನ್ನು ಕುಳ್ಳಿರಿಸಿಕೊಂಡು ಅತಿವೇಗವಾಗಿ ಚಲಾಯಿಸಿಕೊಂಡು ಬಂದು ಯಾವುದೇ ಸೂಚನೆ ನೀಡದೇ ಒಮ್ಮೆಲೇ ಬಲಕ್ಕೆ ತಿರುಗಿಸಿದ ಪರಿಣಾಮ ಸ್ಕೂಟರ್ ಸತೀಶ್ ರವರ ಬೈಕ್ ಗೆ ಡಿಕ್ಕಿಯಾಗಿ ಬೈಕ್ ನ ಹ್ಯಾಂಡಲ್ ಸತೀಶ್ ರವರ ಕಾಲರ್ ಬೋನ್ ಗೆ ತಾಗಿ ಕಾರ್ಕಳ ಸ್ಪಂದನ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದು, ಸ್ಕೂಟರ ಸಹಸವಾರರಿಗೂ ಸಣ್ಣಪುಟ್ಟ ಗಾಯವುಂಟಾಗಿರುತ್ತದೆ

Leave a Reply

Your email address will not be published. Required fields are marked *