Crime Reported in Mangalore Traffic North Police Station

ದಿನಾಂಕ 11-04-2019 ರಂದು ಪಿರ್ಯಾದಿದಾರರಾದ ಶ್ರೀಕಾಂತ್ ಶೆಟ್ಟಿ ರವರು ತನ್ನ ಬಾಬ್ತು KA-19-MD-1183 ನೇ ನಂಬ್ರದ ಕಾರನ್ನು ಚಲಾಯಿಸಿಕೊಂಡು ಸುರತ್ಕಲ್ ನಿಂದ ಕಾಟಿಪಳ್ಳ ಕಡೆಗೆ ಹೋಗುತ್ತಾ 22:40 ಗಂಟೆಗೆ ಕಾರ್ ಕ್ಯಾರ್ ಅಟೋ ವರ್ಕ್ಸ್ ಎದುರು ತಲುಪಿದಾಗ ತನ್ನ ಎದುರುಗಡೆಯಿಂದ KA-19-EY-8915 ನೇ ನಂಬ್ರದ ಮೋಟಾರ್ ಸೈಕಲನ್ನು ಅದರ ಸವಾರ ಬೃಜೇಶ್ ರವರು ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಅರ್ಜಿದಾರರ ಕಾರಿನ ಮುಂಭಾಗಕ್ಕೆ ಢಿಕ್ಕಿ ಹೊಡೆದು ಢಿಕ್ಕಿಯ ರಭಸಕ್ಕೆ ಮೋಟಾರ್ ಸೈಕಲ್ ಸವಾರ ಮೋಟಾರ್ ಸೈಕಲ್ ಸಮೇತ ರಸ್ತೆಗೆ ಬಿದ್ದು, ಆತನ ಸೊಂಟ ಮತ್ತಿತ್ತರ ಭಾಗಗಳಿಗೆ ಗುದ್ದಿದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ಮಂಗಳೂರು ಎ.ಜೆ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿ ಪಿರ್ಯಾದಿಯ ಸಾರಾಂಶ.

Leave a Reply

Your email address will not be published. Required fields are marked *