Crime Reported in Mangalore Traffic North Police Station

ದಿನಾಂಕ 08/04/2019 ರಂದು ಪಿರ್ಯಾದಿದಾರರಾದ ಶೀಮತಿ ಯಶೋಧರವರು ತನ್ನ ಮಾವ ಲೋಕಯ್ಯ ಪೂಜಾರಿಯವರ ಜೊತೆಯಲ್ಲಿ  ಸಮಯ ರಾತ್ರಿ 08:30 ಗಂಟೆಗೆ ಕಾನ ಬಳಿಯಿರುವ ಗಣೇಶ್ ಬೀಡಿ ಜಂಕ್ಷನ್  ಬಳಿ ತಲುಪಿ ಪಿರ್ಯಾದಿದಾರರು ಮತ್ತು ಪಿರ್ಯಾದಿದಾರರ  ಮಾವ ಲೋಕಯ್ಯ ಪೂಜಾರಿಯವರು ರಸ್ತೆಯನ್ನು ದಕ್ಷಿಣದಿಂದ ಉತ್ತರದ ದಿಕ್ಕಿಗೆ ದಾಟುತ್ತಿರುವಾಗ ಸುರತ್ಕಲ್ ಕಡೆಯಿಂದ ಕಾನ ಕಡೆಗೆ KA-19-EG-5029 ನೇ ನಂಬ್ರದ ಮೋಟಾರ್ ಸೈಕಲನ್ನು ಅದರ ಸವಾರ ಎಮ್.ಆರ್ ಶಕೀಲ್ ಎಂಬವರು ನಿರ್ಲಕ್ಷ್ಯತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ಮಾವನಾದ ಲೋಕಯ್ಯ ಪೂಜಾರಿರವರಿಗೆ ಡಿಕ್ಕಿಪಡಿಸಿದ ಪರಿಣಾಮ ಅವರು ಮಣ್ಣು ರಸ್ತೆಗೆ ಎಸೆಯಲ್ಪಟ್ಟು ಬಿದ್ದು ಅವರ ಹಣೆಗೆ ರಕ್ತಗಾಯ, ಎಡಕಿವಿಗೆ ರಕ್ತಗಾಯ ಹಾಗೂ ಎಡ ಕೈಗೆ ಗಂಭೀರ ಸ್ವರೂಪದ ಗಾಯ ಮತ್ತು ಸೊಂಟಕ್ಕೆ ಮೂಳೆ ಮೂರಿತದ ಗಾಯವಾಗಿದ್ದು ಚಿಕಿತ್ಸೆಯ ಬಗ್ಗೆ ಸರಕಾರಿ ವೆನ್ಲಾಕ್ ಆಸ್ಪತ್ರೆ ಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿ

Leave a Reply

Your email address will not be published. Required fields are marked *