Crime Reported in Mangalore Traffic North Police Station

ದಿನಾಂಕ 20-03-2019 ರಂದು 23:45 ಗಂಟೆಗೆ ಪಿರ್ಯಾದಿದಾರರಾದ ಪ್ರವೀಣ್ ಎಂ ಸಾಲ್ಯಾನ್ ರವರು ಚಿತ್ರಾಪುರ ಕಡೆಯಿಂದ ಬೈಕಂಪಾಡಿ ಕಡೆಗೆ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಬರುತ್ತಾ ರಹೆಜಾ ಕಟ್ಟಡದ ಬಳಿ ತಲುಪಿದಾಗ ಪಿರ್ಯಾದಿದಾರರ ಹಿಂದಿನಿಂದ ಮೊಟಾರ್ ಸೈಕಲ್ ನಂಬ್ರ KA-19-EK-2021 ನೇದನ್ನು ಅದರ  ಸವಾರ ವಿಶ್ವನಾಥ ಎಂಬವರು ನಿರ್ಲಕ್ಷತನದಿಂದ  ಮಾನವ ಜೀವಕ್ಕೆ ಅಪಾಯಕರವಾದ ರೀತಿಯಲ್ಲಿ ಚಲಾಯಿಸಿ ಪಿರ್ಯಾದಿದಾರರಿಗೆ ಹಿಂದಿನಿಂದ  ಡಿಕ್ಕಿ ಪಡಿಸಿದ ಪರಿಣಾಮ ಅವರು ರಸ್ತೆಗೆ ಬಿದ್ದು ಎಡ ಭುಜಕ್ಕೆ ಗಂಭೀರ ಸ್ವರೂಪದ ಗಾಯವಾಗಿ ಚಿಕಿತ್ಸೆಯ ಬಗ್ಗೆ ಸುರತ್ಕಲಿನ ಅಥರ್ವಾ ಒರ್ತೋ ಕೇರ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿ ಪಿರ್ಯಾದಿ ಸಾರಾಂಶ.

Leave a Reply

Your email address will not be published. Required fields are marked *