Crime Reported in Mangalore Traffic North Police Station

ದಿನಾಂಕ 14-01-2019 ರಂದು 09:00 ಗಂಟೆಗೆ ಪಿರ್ಯಾದಿದಾರರಾದ ಅಭಿಶೇಖ್ ರವರು ತನ್ನ ಬಾಬ್ತು KA19EU2468ನೇ ಮೋಟಾರು ಸೈಕಲಿನಲ್ಲಿ ಸವಾರಿ ಮಾಡಿಕೊಂಡು ಕಟೀಲು ಕಡೆಯಿಂದ ಬೈಕಂಪಾಡಿ ಕಡೆಗೆ ಕಿನ್ನಿಗೊಳಿ ಮಾರ್ಗವಾಗಿ ಹೊಸಕಾವೇರಿ ಬಸ್ಸು ನಿಲ್ದಾಣದ ಬಳಿ ತಲುಪುತ್ತಿದ್ದಂತೆ ಪಕ್ಷಿಕೆರೆ ಕಡೆಯಿಂದ ಕಿನ್ನಿಗೋಳಿ ಕಡೆಗೆ KA19AA7567ನೇ ನಂಬ್ರದ ಬಸ್ಸುನ್ನು ಅದರ ಚಾಲಕ ಲೋಕಯ್ಯ ಎಂಬವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ರಸ್ತೆಯ ಬಲ ಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಚಲಾಯಿಸುತ್ತಿದ್ದ ಮೋಟಾರು ಸೈಕಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಮೋಟಾರು ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದು ಅವರ ಎಡಕಾಲಿಗೆ ಗುದ್ದಿದ ಗಾಯ, ಬಲಕೈಗೆ ತರಚಿದ ಗಾಯ ಬಲಸೊಂಟಕ್ಕೆ ತರಚಿದ ಗಾಯವಾಗಿ ಈ ಬಗ್ಗೆ ಚಿಕಿತ್ಸೆಗಾಗಿ ಮುಕ್ಕ ಶ್ರೀನಿವಾಸ ಆಸ್ಪತ್ರೆಯನ್ನು ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂದು ಪಿರ್ಯಾದಿಯ ಸಾರಾಂಶ.

Leave a Reply

Your email address will not be published. Required fields are marked *