Crime Reported in Mangalore Traffic North Police Station

ಪಿರ್ಯಾದಿದಾರರು ಸಹಸವಾರರಾಗಿ ಹಾಗೂ ಅವರ ಸ್ನೇಹಿತರಾದ ಮೊಹಮ್ಮದ್ ಹಸನ್ ರವರು ಸವಾರರಾಗಿ ದಿನಾಂಕ 12/01/2019 ರಂದು ಕೆಲಸದ ನಿಮೀತ್ತ ತೋಕ್ಕೂಟ್ಟಿನಿಂದ ಮಂಗಳೂರಿಗೆ ಮೋಹಮ್ಮದ್ ಹಸನ್ ರವರ ಬಾಬ್ತು ಸ್ಕೂಟಾರ್ ನಂಬ್ರ KA19HA2285 ನೇದರಲ್ಲಿ ಸವಾರಿ ಮಾಡಿಕೋಂಡು ಹೋಗುತ್ತಾ ಸಮಯ ಸುಮಾರು 13:40 ಗಂಟೆಗೆ ಕಲ್ಲಾಪು ಮಸೀದಿ ಬಳಿ ತಲುಪುತ್ತಿದ್ದಂತೆ ಪಿರ್ಯಾದಿದಾರರ ಎಡಗಡೆಯಿಂದ ಅಡ್ಡ ರಸ್ತೆಯಲ್ಲಿ ಬಂದ KA19EJ8918 ನೇದರ ಮೋಟಾರ ಸೈಕಲ್ ಸವಾರನು ತನ್ನ ಮೋಟಾರ ಸೈಕಲ್ ನ್ನು ನಿರ್ಲಕ್ಷ್ಯತ ಹಾಗೂ ದುಡುಕುತನದಿಂದ ಚಲಾಯಿಸಿಕೊಂಡು ಬಂದು ಮುಖ್ಯ ರಸ್ತೆಯಲ್ಲಿ ಹೋಗುತ್ತಿದ್ದ ಪಿರ್ಯಾದಿದಾರರು ಸಹಸವಾರರಾಗಿ ಹೋಗುತ್ತಿದ್ದ ಸ್ಕೂಟರ್ ಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಹಾಗೂ ಸವಾರ ಮೋಹಮ್ಮ ಹಸನ್ ರವರು ಡಾಮಾರು ರಸ್ತೆಗೆ ಬಿದ್ದು ಸವಾರ ಮೋಹಮ್ಮದ್ ರವರಿಗೆ ಬಲಗೈ ಬುಜದ ಮೂಳೆ ಮೂರಿತದಗಾಯ ಹಾಗೂ ಪಿರ್ಯಾದಿದಾರರಿಗೆ ಬಲ ಪಾದಕ್ಕೆ ರಕ್ತಗಾಯವಾಗಿದ್ದು ಕೂಡಲೇ ಅಲ್ಲಿ ಸೇರಿದ್ದ ಸಾರ್ವಜನಿಕರು ಚಿಕಿತ್ಸೆ ಬಗ್ಗೆ ತೊಕ್ಕೋಟ್ಟಿನ ಸಹರಾ ಆಸ್ಪತ್ರೆಗೆ ದಾಖಲಿಸಿದ್ದು ನಂತರ ಹೆಚ್ಚಿನ ಚಿಕಿತ್ಸೆಗಾಗಿ ಹೈಲ್ಯಾಂಡ್ ಆಸ್ಪತ್ರೆಗೆ ದಾಖಲಿಸಿದ್ದು ಪರಿಕ್ಷೀಸಿದ ಅಲ್ಲಿನ ವೈದ್ಯರು ಒಳರೋಗಿಯಾಗಿ ದಾಖಲಿಸಿಕೊಂಡಿರುತ್ತಾರೆ

Leave a Reply

Your email address will not be published. Required fields are marked *