Crime Reported in Mangalore Traffic North Police Station

ಪಿರ್ಯಾದಿದಾರರು ಈ ದಿನ ದಿನಾಂಕ 16-10-2018 ರಂದು ಅವರ ಭಾವ ಸಹಕತುಲ್ಲ ರವರ ಬಾಬ್ತು ಸ್ಕೂಟರ್ ನಂಬ್ರ KA-19-EX-6810 ನೇದರಲ್ಲಿ ಸಹಕತುಲ್ಲ ಸವಾರರಾಗಿಯು ಪಿರ್ಯಾದಿದಾರರು ಸಹಸವಾರರಾಗಿ ಕೋಟೆಕಾರಿನಿಂದ ಉಳ್ಳಾಲದ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವ ಸಮಯ ಸುಮಾರು ಬೆಳಿಗ್ಗೆ 08.40 ಗಂಟೆಗೆ ವಾಣಿ ಹಾರ್ಡ್ ವೇರ್ ಅಂಗಡಿಯ ಎದುರು ತಲುಪುತ್ತಿದ್ದಂತೆ ತೊಕ್ಕೊಟ್ಟು ಕಡೆಯಿಂದ ತಲಪಾಡಿ ಕಡೆಗೆ KA-19-EL-4356 ನೇದರ ಬೈಕ್ ಸವಾರನು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರು ಸವಾರಿ ಮಾಡುತ್ತಿದ್ದ ಸ್ಕೂಟರಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಹಾಗೂ ಸಹಕತುಲ್ಲ ರವರು ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಪಿರ್ಯಾದಿದಾರರ ಮೂಗಿಗೆ ಗುದ್ದಿದ ರೀತಿಯ ರಕ್ತಗಾಯ ಹಾಗೂ ಹಣೆಗೆ ಉಬ್ಬಿದ ಗಾಯ ಮತ್ತು ಸಹಕತುಲ್ಲ ರವರಿಗೆ ಎಡಕಾಲಿಗೆ ಗುದ್ದಿದ ರೀತಿಯ ಗಾಯ ವಾಗಿದ್ದು ಚಿಕಿತ್ಸೆಯ ಬಗ್ಗೆ ತೊಕ್ಕೊಟ್ಟು ನೇತಾಜಿ ಎಲ್ಲಪ್ಪ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ

Leave a Reply

Your email address will not be published. Required fields are marked *