Crime Reported in Mangalore Traffic North Police Station

ಪಿರ್ಯಾದಿದಾರರು ಹಾಗೂ ಎಎಸ್ಐ ನಾರಾಯನ್ ನಾಯ್ಕ ಮತ್ತು ಸಿಪಿಸಿ ಸಂಗಪ್ಪ ಎಂಬವರುಗಳಿಗೆ ಸಂಚಾರ ಪಶ್ವಿಮ ಠಾಣಾ ವ್ಯಾಪ್ತಿಗೆ ಸಂಬಂದಿಸಿದ ಹೈವೇ ಪೆಟ್ರೋಲ್ ವಾಹನ ನಂಬ್ರ KA-19-G-0810 ನೇದರಲ್ಲಿ ಈ ದಿನ ದಿನಾಂಕ 10-10-2018 ರಂದು ಬೆಳಿಗ್ಗೆ 08.30 ರಿಂದ 09.20 ಗಂಟೆಯವರೆಗೆ ಮೇರಿಹಿಲ್ ವಿಕಾಸ್ ಕಾಲೇಜ್ ಪಾಯಿಂಟ್ ನಲ್ಲಿ ಕರ್ತವ್ಯ ನಿರ್ವಹಿಸುವಂತೆ ನೀಡಿದ ಆದೇಶದ ಮೇರೆಗೆ ಇವರುಗಳು ಮೇರಿಹಿಲ್ ಇನ್ ಲ್ಯಾಂಡ್ ಅಪಾರ್ಟ್ ಮೆಂಟ್ ಹತ್ತಿರ ಸಂಚಾರ ಉಲ್ಲಘಂಣೆ ಮಾಡಿ ವಾಹನ ಸವಾರಿ ಮಾಡುವ ವಾಹನಗಳ ತಪಾಸಣೆ ಮಾಡುತ್ತಿರುವ ವೇಳೆ ಸಮಯ ಸುಮಾರು ಬೆಳಿಗ್ಗೆ 09.00 ಗಂಟೆಗೆ ಪದವಿನಂಗಡಿ ಕಡೆಯಿಂದ ಮೇರಿಹಿಲ್ ಕಡೆಗೆ KA-19-EY-2527 ನೇದರ ಮೋಟಾರ್ ಸೈಕಲ್ ಸವಾರ ಪ್ರೀತಮ್ ಎಂಬವರು ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಹೆಲ್ಮೇಟ್ ಧರಿಸದೇ ಚಲಾಯಿಸಿಕೊಂಡು ಬಂರುತ್ತಿದ್ದನ್ನು ನೋಡಿದ ಎಎಸ್ಐ ನಾರಾಯಣ ನಾಯ್ಕ ರವರು ವಾಹನವನ್ನು ನಿಲ್ಲಿಸಲು ಸೂಚನೆ ನೀಡಿದಾಗ ತನಿ ತನ್ನ ಮೋಟಾರ್ ಸೈಕಲನ್ನು ನಿಲ್ಲಿಸದೇ ಎಎಸ್ಐ ನಾರಾಯಣ ನಾಯ್ಕ ರವರಿಗೆ ಡಿಕ್ಕಿ ಹೊಡೆದನು ಇದರ ಪರಿಣಾಮ ಎಎಸ್ಐ ನಾರಾಯಣ ನಾಯ್ಕ ಮತ್ತು ಮೋಟಾರ್ ಸೈಕಲ್ ಸವಾರನು ಕೂಡಾ ಡಾಮಾರು ರಸ್ತೆಗೆ ಬಿದ್ದು ಎಎಸ್ಐ ನಾರಾಯಣ ನಾಯ್ಕರವರ ಹಣೆಯ ಎಡಬದಿಗೆ ರಕ್ತಗಾಯ, ಎಡಕಾಲಿನ ಮೊಣಗಂಟಿಗೆ , ಬಲಗೈ ಅಂಗೈಗೆ ರಕ್ತಗಾಯ ಹಾಗೂ ಮೋಟಾರ್ ಸೈಕಲ್ ಸವಾರನಿಗೂ ಚಿಕ್ಕಪುಟ್ಟ ಗಾಯಗಳಾಗಿದ್ದು ಪಿರ್ಯಾದಿದಾರರು ಹಾಗೂ ಸಿಪಿಸಿ ಸಂಗಪ್ಪ ರವರು ಗಾಯಾಳುಗಳನ್ನು ಉಪಚರಿಸಿ ಎಎಸ್ಐ ನಾರಾಯಣ ನಾಯ್ಕ ರವರನ್ನು ಹೈವೇ ಪೆಟ್ರೋಲ್ ವಾಹನದಲ್ಲಿ ಎಜೆ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲು ಮಾಡಿರುತ್ತಾರೆ.

Leave a Reply

Your email address will not be published. Required fields are marked *