Crime Reported in Mangalore Traffic North Police Station

ದಿನಾಂಕ 06/02/2018 ರಂದು ಫಿರ್ಯಾದಿದಾರರು ತನ್ನ ಗೆಳೆಯ ಅಶೋಕ ಕುಮಾರ್ ರವರ ಬಬ್ತು KA 21 L 1485 ನೇ ಮೋಟಾರ್ ಸೈಕಲ್ ನಲ್ಲಿ ಸಹಸವಾರರಾಗಿ ಕುಳಿತುಕೊಂಡು ಅಶೋಕ ಕುಮಾರ್ ರವರು ಸವಾರರಾಗಿ ಮುಕ್ಕದಿಂದ ಮಂಗಳೂರು ಕಡೆಗೆ ಚಲಾಯಿಸಿಕೊಂಡು ಹೋಗುತ್ತಾ ತಡಂಬೈಲ್ ಬಳಿ ತಲುಪಿದಾಗ ಮೋಟಾರ್ ಸೈಕಲ್ ಸವಾರ ಅಶೋಕ ಕುಮಾರ್ ರವರು ನಿರ್ಲಕ್ಷತನದಿಂದ ಮಾನವ ಜೀವಕ್ಕೆ ಅಪಾಯಕಾರಿಯಾದ ರೀತಿಯಲ್ಲಿ ಚಲಾಯಿಸಿ ವಾಹನವನ್ನು ಓವರ್ ಟೇಕ್ ಮಾಡುವ ಸಂದರ್ಭ ಯಾವುದೇ ಸೂಚನೆಯನ್ನು ನೀಡದೆ ಒಮ್ಮೆಲೆ ಬ್ರೇಕ್ ಹಾಕಿದ ಪರಿಣಾಮ ಹಿಂಬದಿ ಕುಳಿತಿದ್ದ ಫಿರ್ಯಾದಿ ಸದಾನಂದ ರೈ ರವರು ರಸ್ತೆಗೆ ಎಸೆಯಲ್ಪಟ್ಟು ಸೊಂಟದ ಎಡಬದಿಯ ಎಲುಬಿಗೆ, ಎಡಗೈ ಮೊಣಗಂಟಿಗೆ, ಎಡಕಾಲಿನ ಪಾದ ಹಾಗೂ ಹಿಂಭಾಗದ ಗಂಟು ಇನ್ನಿತರ ಭಾಗಗಳು ಜಖಂಗೊಂಡು ರಕ್ತ ಗಾಯವಾಗಿ ಚಿಕಿತ್ಸೆಯ ಬಗ್ಗೆ ಹೈಲ್ಯಾಂಡ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುವುದಾಗಿದ್ದು ಸದ್ರಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *