Crime Reported in Mangalore Traffic North Police Station

ದಿನಾಂಕ 12-11-2017 ರಂದು ಪಿರ್ಯಾದಿದಾರರಾದ ದಿವೇಶ್ ಪೂಜಾರಿ ರವರು ತನ್ನ ಬಾಬ್ತು KA-19-EF-4853 ನೇ ನಂಬ್ರದ ಮೋಟಾರ್ ಸೈಕಲ್ ನಲ್ಲಿ ತಾನು ಸವಾರನಾಗಿ ತನ್ನ ತಂಗಿ ಚೈತ್ರ ಕುಮಾರಿ ಯವರನ್ನು ಸಹ ಸವಾರಳಾನ್ನಾಗಿ ಕುಳ್ಳಿರಿಸಿಕೊಂಡು ಕಟೀಲು ದೇವಸ್ಥಾನದಿಂದ ಸುರತ್ಕಲ್ ಕಡೆಗೆ ಕಿನ್ನಿಗೋಳಿ ಮಾರ್ಗವಾಗಿ ಸವಾರಿ ಮಾಡಿಕೊಂಡು ಬರುತ್ತಾ ಕಿನ್ನಿಗೋಳಿ ಸ್ವಾಗತ್ ಬಾರ್ ಹತ್ತಿರ ತಲುಪಿದಾಗ, KA-19-EL-6584ನೇ ನಂಬ್ರದ ಮೋಟಾರ್ ಸೈಕಲನ್ನು ಅದರ ಸವಾರ ರಮೇಶ್ ಕೋಟ್ಯಾನ್ ಎಂಬವರು ಯಾವುದೇ ಸೂಚನೆ ನೀಡದೆ ಬಾರ್ ನಿಂದ ಹೊರಗಡೆ ಒಮ್ಮೆಲೆ ಸವಾರಿಮಾಡಿಕೊಂಡು ಬಂದು ಪಿರ್ಯಾದಿದಾರರ ಮೋಟಾರ್ ಸೈಕಲ್ ಗೆ ಢಿಕ್ಕಿಪಡಿಸಿದ ಪರಿಣಾಮ ಪಿರ್ಯಾದಿದಾರರಿಗೆ ಮೋಟಾರ್ ಸೈಕಲ್ ನ ನಿಯಂತ್ರಣ ತಪ್ಪಿ ಮೋಟಾರ್ ಸೈಕಲ್ ಸಮೇತ ಪಿರ್ಯಾದಿದಾರರು ಹಾಗೂ ಸಹ ಸವಾರರು ರಸ್ತೆಗೆ ಬಿದಿದ್ದು, ಪಿರ್ಯಾದಿದಾರರ ಎಡಕಾಲಿನ ಪಾದಕ್ಕೆ ಗುದ್ದಿದ ರಕ್ತಗಾಯ ಹಾಗೂ ಎಡಕೈ ಭುಜಕ್ಕೆ ಗುದ್ದಿದ ಗಾಯ ಹಾಗೂ ಸಹ ಸವಾರಳಾದ ಚೈತ್ರ ಕುಮಾರಿ ಯವರ ಎಡಕೈಗೆ ತರಚಿದ ಗಾಯವಾಗಿದ್ದು ಚಿಕತ್ಸೆ ಬಗ್ಗೆ ಸುರತ್ಕಲ್ ನ ಅರ್ಥವ ಅರ್ಥೋಕೇರ್ ಆಸ್ಪತ್ರೆಯಲ್ಲಿ ದಾಖಲಾಗಿರುವುದಾಗಿದೆ. ಸದ್ರಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *