Crime Reported in Mangalore Traffic East Police Station

ದಿನಾಂಕ: 13-04-2019 ರಂದು ಪಿರ್ಯಾದಿದಾರರು ತನ್ನ ಗಂಡ ಹಾಗೂ ಅತ್ತೆಯಾದ ಶ್ರೀಮತಿ. ರಮ್ಲ ರವರೊಂದಿಗೆ  KA-19-D-8191 ನಂಬ್ರದ ಆಟೋರಿಕ್ಷಾದಲ್ಲಿ ಪ್ರಯಾಣಿಕರಾಗಿ ಕುಳಿತು ಎ.ಜೆ.ಆಸ್ಪತ್ರೆ ಕಡೆಯಿಂದ ಪಂಪ್ ವೆಲ್ ಕಡೆಗೆ ಹೋಗುತ್ತಾ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಸಂಜೆ ಸಮಯ ಸುಮಾರು 3:40 ಗಂಟೆಗೆ ಕೆ.ಪಿ.ಟಿ ಬಳಿಯ ವ್ಯಾಸನಗರ ಕ್ರಾಸ್ ಬಳಿ ತಲುಪುತ್ತಿದ್ದಾಗ ವ್ಯಾಸನಗರ ರಸ್ತೆಯಿಂದ ಬರುತ್ತಿದ್ದ ಸ್ಕೂಟರೊಂದನ್ನು ಕಂಡು ಪಿರ್ಯಾದಿದಾರರು ಪ್ರಯಾಣಿಸುತ್ತಿದ್ದ ಆಟೋ ರಿಕ್ಷಾ ಚಾಲಕನು ನಿರ್ಲಕ್ಷ್ಯತನದಿಂದ ಒಮ್ಮೆಲೇ ಬ್ರೇಕ್ ಹಾಕಿ ಎಡಕ್ಕೆ ತಿರುಗಿಸಿದ ಪರಿಣಾಮ ಆಟೋ ರಿಕ್ಷಾ ಬಲ ಮಗ್ಗಲಾಗಿ ರಸ್ತೆಯಲ್ಲಿ ಮಗುಚಿ ಬಿದ್ದು, ಪಿರ್ಯಾದಿದಾರರ ಬಲಕೈ ಮೊಣಗಂಟಿನ ಬಳಿ ಮೂಳೆ ಸ್ಥಳಾಂತರಗೊಂಡ ಗುದ್ದಿದ ಗಾಯ, ಹಾಗೂ ಎಡಕಾಲಿನ ಮೊಣಗಂಟಿನ ಬಳಿ ತರಚಿದ ರೀತಿಯ  ಗಾಯವಾಗಿದ್ದು, ಗಾಯಾಳು ಚಿಕಿತ್ಸೆ ಬಗ್ಗೆ ಎ.ಜೆ.ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ ಎಂಬಿತ್ಯಾದಿ.

Leave a Reply

Your email address will not be published. Required fields are marked *