Crime Reported in Mangalore Traffic East Police Station

ದಿನಾಂಕ: 13-03-2019 ರಂದು ಪಿರ್ಯಾದಿದಾರರು ಮಲ್ಲಿಕಟ್ಟೆ ಎಂಬಲ್ಲಿ ಕೆಲಸ ಮುಗಿಸಿ ಮನೆಗೆ ಹೋಗುವ ಸಲುವಾಗಿ ಸಿಟಿ ಬಸ್ಸಿನಲ್ಲಿ ಮಲ್ಲಕಟ್ಟೆಯಿಂದ ಬಿಕರ್ನಕಟ್ಟೆಗೆ ಬಂದು, ಬಸ್ಸಿನಿಂದ ಇಳಿದು ನಂತರ ಬಿಕರ್ನಕಟ್ಟೆಯ ಮೂವ್ ಆ್ಯಂಡ್ ಪಿಕ್ ಅಂಗಡಿಯ ಬಳಿ ರಸ್ತೆ ದಾಟುತ್ತಾ ರಸ್ತೆಯ ಇನ್ನೊಂದು ಬದಿಗೆ ತಲುಪುತ್ತಿದ್ದಾಗ, ಸಂಜೆ ಸಮಯ ಸುಮಾರು 5:45 ಗಂಟೆಗೆ KA-19-EU-3005 ನಂಬ್ರದ ಬುಲ್ಲೆಟ್ ಮೋಟಾರ್ ಸೈಕಲ್ ನ್ನು ಅದರ ಸವಾರ ಅಭಿಲಾಷ್ ಕೊಟ್ಯಾನ್ ಎಂಬವರು ಬಿಕರ್ನ್ ಕಟ್ಟೆ ಕೈಕಂಬ ಕಡೆಯಿಂದ ನಂತೂರು ಕಡೆಗೆ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ ಡಾಮಾರು ರಸ್ತೆಯಲ್ಲಿ ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ರಸ್ತೆ ದಾಟುತ್ತಿದ್ದ ಪಿರ್ಯಾದಿದಾರರಿಗೆ ಢಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಡಾಮಾರು ರಸ್ತೆಗೆ ಬಿದ್ದುಪಿರ್ಯಾದಿದಾರರ ಎಡಕಾಲಿನ ಕೋಲು ಕಾಲಿಗೆ ಹಾಗೂ ಎಡಕಾಲಿನ ತೊಡೆಗೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿದ್ದು, ಗಾಯಾಳು ಸಿಟಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು,   ಅಪಘಾತ ಪಡಿಸಿದ ಬುಲ್ಲೆಟ್ ಮೋಟಾರ್ ಸೈಕಲ್ ಸವಾರನು ಬುಲ್ಲೆಟ್ ಮೋಟಾರ್ ಸೈಕಲ್ ಸಮೇತ ಡಾಮಾರು ರಸ್ತೆಗೆ ಬಿದ್ದು  ಗಾಯಗೊಂಡು ಸಿಟಿ ಆಸ್ಪತ್ರೆಯಲ್ಲಿ ದಾಖಾಲಾಗಿರುತ್ತಾನೆ.

Leave a Reply

Your email address will not be published. Required fields are marked *