Crime Reported in Mangalore Traffic East Police Station

ಪಿರ್ಯಾದಿದಾರರು ದಿನಾಂಕ: 11-01-2019 ರಂದು ವೆನ್ ಲಾಕ್ ಆಸ್ಪತ್ರೆಯ ಬಳಿಯಿರುವ ಜನೌಷಧಿ ಕೇಂದ್ರಕ್ಕೆ ಹೋಗುವ ಸಲುವಾಗಿ ವೆನ್ ಲಾಕ್ ಆಸ್ಪತ್ರೆಯ ಬಳಿ ಹಂಪನಕಟ್ಟೆ ಕಡೆಯಿಂದ ರೈಲ್ವೇ ಸ್ಟೇಷನ್ ಕಡೆಗೆ ಹೋಗುವ ಸಲುವಾಗಿ ರಸ್ತೆಯ ಬದಿಯಲ್ಲಿ ನಿಂತು ರೈಲ್ವೇ ಸ್ಟೇಷನ್ ಕಡೆಯಿಂದ ಹಂಪನಕಟ್ಟೆ ಕಡೆಗೆ ಬರುವ ವಾಹನಗಳನ್ನು ಗಮನಿಸುತ್ತಿದ್ದಾಗ, ಸಾಯಂಕಾಲ ಸಮಯ ಸುಮಾರು 4:50 ಗಂಟೆಗೆ KL-59-A-6689 ನಂಬ್ರದ ಮೋಟಾರು ಸೈಕಲ್ ನ್ನು ಅದರ ಸವಾರ ವಿಷ್ಣು ಎಂಬಾತನು ಮಾನವ ಜೀವಕ್ಕೆ ಹಾನಿಯಾಗುವ ರೀತಿಯಲ್ಲಿ ದುಡುಕುತನ ಹಾಗು ನಿರ್ಲಕ್ಷ್ಯತನದಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರಿಗೆ ಢಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರು ಕಾಂಕ್ರೀಟ್ ರಸ್ತೆಗೆ ಬಿದ್ದು, ಪಿರ್ಯಾದಿದಾರರ ಎಡಕಾಲಿನ ತೊಡೆಯ ಭಾಗಕ್ಕೆ ಮೂಳೆ ಮುರಿತದ ಗಂಭೀರ ಸ್ವರೂಪದ ಗಾಯವಾಗಿದ್ದು ಚಿಕಿತ್ಸೆ ಬಗ್ಗೆ ವೆನ್ ಲಾಕ್ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ

Leave a Reply

Your email address will not be published. Required fields are marked *