Crime Reported in Mangalore Traffic East Police Station

ಪಿರ್ಯಾದಿದಾರರಾದ ಅಬ್ದುಲ್ ರವರ ತಂದೆಯವರು ದಿನಾಂಕ 12-03-2018 ರಂದು KA-19-J-4141 ನಂಬ್ರದ ಮೋಟಾರ ಸೈಕಲ್ ನಲ್ಲಿ  ಮನೆಯಾದ ಎಮ್ಮೆಕೆರೆಯಿಂದ ಹೊಯಿಗೆ ಬಜಾರ್  ಕಡೆಗೆ ಹೋಗುತ್ತಾ ಹೊಯಿಗೆ ಬಜಾರ್  ಕರ್ನಾಟಕ ಮೀನುಗಾರಿಕ ಅಭಿವೃದ್ದಿ ನಿಗಮ ನಿಯಮಿತ ಕಟ್ಟಡದ ಬಳಿಯ ಮಸೀದಿ ಬಳಿ ತಲುಪುತ್ತಿದ್ದಂತೆ ಹೊಯಿಗೆ ಬಜಾರ್ ಕಡೆಯಿಂದ ಬೋಳಾರ ಕಡೆಗೆ KA-19-EC-5693  ನಂಬ್ರದ ಮೋಟಾರ್ ಸೈಕಲನ್ನು ಅದರ ಸವಾರ ಗೋವಿಂದ ಎಂಬಾತನು ಸಾರ್ವಜನಿಕ ಡಾಮಾರು ರಸ್ತೆಯಲ್ಲಿ ದುಡುಕುತನ ಹಾಗೂ ನಿರ್ಲಕ್ಷ್ಯತನದಿಂದ ರಸ್ತೆಯ ತೀರಾ ಬಲಬದಿಯಲ್ಲಿ  ಚಲಾಯಿಸಿಕೊಂಡು ಬಂದು ಪಿರ್ಯಾದಿದಾರರ ತಂದೆಯ ಮೋಟಾರ್ ಸೈಕಲ್ಲಿಗೆ ಡಿಕ್ಕಿ ಪಡಿಸಿದ ಪರಿಣಾಮ ಪಿರ್ಯಾದಿದಾರರ ತಂದೆಯವರು ಡಾಮಾರು ರಸ್ತೆಗೆ ಬಿದ್ದು ತಲೆಗೆ ಗಂಭೀರ ಸ್ವರೂಪದ ಗುದ್ದಿದ ಒಳಗಾಯವಾಗಿದ್ದು ಗಾಯಾಳು ಮಂಗಳೂರು ಯುನಿಟಿ ಆಸ್ಪತ್ರೆಯಲ್ಲಿ ಪ್ರಜ್ಙಾಹೀನ ಸ್ಥಿತಿಯಲ್ಲಿ  ಒಳರೋಗಿಯಾಗಿ ದಾಖಲಾಗಿರುತ್ತಾರೆ ಸದ್ರಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *