Crime Reported in Mangalore Traffic East Police Station

ದಿನಾಂಕ:11-01-2018ರಂದು ಪಿರ್ಯಾದಿದಾರರಾದ ಸಯ್ಯದ್ ಇಮ್ತಿಯಾಜ್ ರವರು ಜ್ಯೋತಿ ವೃತ್ತದ ಬಳಿ ಸಂಚಾರ ನಿಯಂತ್ರಣ ಕರ್ತವ್ಯದಲ್ಲಿರುತ್ತಾ ಬಂಟ್ಸ್ ಹಾಸ್ಟೆಲ್ ವೃತ್ತದ ಕಡೆಯಿಂದ ಬರುವ ವಾಹನಗಳಿಗೆ ಕೈಸನ್ನೆ ಮೂಲಕ ನಿಲುಗಡೆ ಮಾಡಿದ್ದು, ಬಾವುಟಗುಡ್ಡ ಕಡೆಯಿಂದ ಬಲ್ಮಠ  ಜಂಕ್ಷನ್ ಕಡೆಗೆ ವಾಹನಗಳನ್ನು ಕಳುಹಿಸಿಕೊಡುತ್ತಿದ್ದು ಆ ಸಮಯಕ್ಕೆ ಬಂಟ್ಸ್ ಹಾಸ್ಟೆಲ್  ಕಡೆಯಿಂದ ಪಿಟಿಸಿ ಹೆಸರಿನ ಕೆಎ-19-ಸಿ-7576 ನೇ ಬಸ್ಸನ್ನು ಅದರ ಚಾಲಕ ಪಿರ್ಯಾದಿದಾರರ ಬಳಿ ನಿಲ್ಲಿಸಿದ್ದು ವಿಳಂಬವಾಗಿದೆ ಎಂದು ಬಸ್ಸನ್ನು ಮುಂದೆ ಮುಂದೆ ದುಡುಕಿನಿಂದ ಚಲಾಯಿಸಿ ಬಂದುದಲ್ಲದೆ ಪಿರ್ಯಾದಿದಾರರು ನೀಡಿದ ಸೂಚನೆಯನ್ನು ಉಲ್ಲಂಘಿಸಿ ಸದ್ರಿ ಬಸ್ಸಿನ ಮುಂದಿನ ಎಡ ಭಾಗದ ಬಾಡಿಯನ್ನು ಪಿರ್ಯಾದಿದಾರರಿಗೆ ತಾಗಿಸಿಕೊಂಡು ಹಂಪನಕಟ್ಟೆ ಕಡೆಗೆ ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗಿರುತ್ತಾರೆ ಇದರ ಪರಿಣಾಮ ಪಿರ್ಯಾದಿದಾರರು ರಸ್ತೆಗೆ ಬಿದ್ದಿದ್ದು ಯಾವುದೇ ಗಾಯಗಳಾಗಿರುವುದಿಲ್ಲ ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *