Crime Reported in Mangalore South Police Station

ಪಿರ್ಯಾದಿದಾರರು ದಕ್ಷಿಣ ದಕ್ಕೆಯಲ್ಲಿ ಡಿವೈನ್ ಮರ್ಸಿ ಬೋಟಿನ ರೈಟರ್ ಆಗಿ ಕೆಲಸ ಮಾಡಿಕೊಂಡಿರುವುದಾಗಿದೆ. ದಿನಾಂಕ: 06-12-2017ರಂದು ಬೆಳಿಗ್ಗೆ  04-00 ಗಂಟೆಗೆ ಮಂಗಳೂರಿನ ದಕ್ಷಿಣ ದಕ್ಕೆಯ ಮತ್ಸ್ಯಾ ಗಂಧ್ಯ ಕಟ್ಟಡದ ಎದುರು ದ್ವಿಚಕ್ರ ವಾಹನ ಪಾರ್ಕ್ ಮಾಡುವ ಸ್ಥಳದಲ್ಲಿ ಪಿರ್ಯಾಧಿದಾರರು ತಮ್ಮ ಮಾಲಕತ್ವದ ಬಾಬ್ತು  ಬಿಳಿ ಬಣ್ಣದ ಹೊಂಡಾ ಆಕ್ಟೀವಾ ಸ್ಕೂಟರ್ ನಂಬ್ರ  KA 19-EJ-4614ನೇದ್ದನ್ನು  ಪಾರ್ಕ್ ಮಾಡಿ ಮೀನು ಹರಾಜು ಮಾಡುವ ಸ್ಥಳಕ್ಕೆ ಹೋಗಿದ್ದು, ಮೀನು ಹರಾಜು ಮುಗಿದ ನಂತರ ಪಿರ್ಯಾದಿದಾರರು ಸ್ಕೂಟರ್ ನಿಲ್ಲಿಸಿದ ಸ್ಥಳಕ್ಕೆ ಹೋದಾಗ ಪಾರ್ಕ್ ಮಾಡಿದ ಸ್ಕೂಟರ್ ಕಾಣದೇ ಇದ್ದು ಈ ಬಗ್ಗೆ ಅಕ್ಕಪಕ್ಕದಲ್ಲಿ ಹುಡುಕಾಡಿ ನಂತರ ಸ್ನೇಹಿತರಲ್ಲಿ ಹಾಗೂ ದಕ್ಕೆಯಲ್ಲಿ ಕೆಲಸ ಮಾಡುವವರಲ್ಲಿ ವಿಚಾರಿಸಿದಲ್ಲಿ ಪಿರ್ಯಾದಿದಾರರ ಸ್ಕೂಟರ್ ಪತ್ತೆಯಾಗದಿರುವುದರಿಂದ  ದಿನಾಂಕ: 06-12-2017 ರಂದು ಬೆಳಿಗ್ಗೆ 4-00 ಗಂಟೆಯಿಂದ 08-00 ಗಂಟೆಯ ಮಧ್ಯೆ ಯಾರೋ ಕಳ್ಳರು ಪಿರ್ಯಾಧಿದಾರರ ಮೋಟಾರು ಸೈಕಲ್ ನಂಬ್ರ KA-19-EJ-4614ನ್ನು ಕಳವು ಮಾಡಿಕೊಂಡು ಹೋಗಿರುವುದಾಗಿ ಸದ್ರಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *