Crime Reported in Mangalore South Police Station

ಪಿರ್ಯಾದಿದಾರರಾದ ಸುದೀರ್ ಕುಮಾರ್ ರವರು  ಪಾಂಡೇಶ್ವರ ಪೊಲೀಸ್ ಲೇನ್ ಕ್ವಾರ್ಟಸ್  ಬಿ ಬ್ಲಾಕ್ನಲ್ಲಿ ವಾಸ್ತವ್ಯವಿದ್ದು  ದಿನಾಂಕ 10-10-2017 ರಂದು ಪಿರ್ಯಾದಿದಾರರು ತನ್ನ  ಕೊಲ್ಯ ಕನ್ನೀರು ತೋಟಮನೆಯ ಗೃಹ ಪ್ರವೇಶದ ಬಗ್ಗೆ ಹೋಗಿದ್ದು ಆ ಸಮಯ ಮನೆಯಲ್ಲಿ ಅವರ ತಾಯಿ ಉಳಕೊಂಡಿರುತ್ತಾರೆ. ತಾಯಿಯವರು ದಿನಾಂಕ 11-10-2017 ಸಂಜೆ 07-00 ಗಂಟೆಗೆ  ಪೊಲೀಸ್ ವಸತಿಗೃಹಕ್ಕೆ ಬೀಗ ಹಾಕಿಆಸ್ಪತ್ರೆಯಲ್ಲಿರುವ ತನ್ನ ಹಿರಿಯ ಮಗಳನ್ನು ನೋಡುವರೇ ಹೋದವರು  ರಾತ್ರಿ ಆಸ್ಪತ್ರೆಯಲ್ಲಿತಂಗಿರುತ್ತಾರೆ. ದಿನಾಂಕ 12-10-2017 ರಂದು ಬೆಳಿಗ್ಗೆ 10-00 ಗಂಟೆಗೆ  ತಾಯಿಯವರು ಪೊಲೀಸ್ವಸತಿಗೃಹಕ್ಕೆ ಬಂದು ನೋಡಿದಾಗ  ವಸತಿಗೃಹದ ಬಾಗಿಲು ತೆರೆದಿದ್ದು   ಒಳಗೆ ಹೋಗಿ ನೋಡಲಾಗಿಮನೆಯ ಬೆಡ್ ರೂಮ್ ನಲ್ಲಿದ್ದ ಗೋದ್ರೇಜ್ ನಲ್ಲಿದ್ದ ಬಟ್ಟೆ ಬರೆಗಳೆಲ್ಲಾ ನೆಲದಲ್ಲಿ ಚೆಲ್ಲಾಪಿಲ್ಲಿಯಾಗಿ ರಾಶಿಹಾಕಿದ್ದು ಈ ಬಗ್ಗೆ ಪಿರ್ಯಾದಿದಾರರಿಗೆ ಕರೆ ಮಾಡಿ ತಿಳಿಸಿದ್ದು ಪಿರ್ಯಾದಿದಾರು ಕೂಡಲೇ ಕ್ವಾಟ್ರಸ್ ಗೆಬಂದು ನೋಡಲಾಗಿ ಮನೆಯ ಗೊದ್ರೇಜ್ ನ ಸೇಪ್ ಲಾಕರ್ ನಲ್ಲಿಟ್ಟಿರುವ ಸುಮಾರು  1,40.000/-ಅಂದಾಜು ಮೌಲ್ಯದ ಆಭರಣಗಳನ್ನು ಯಾರೋ ಕಳ್ಳರು ಕಳವು ಮಾಡಿ ಹೋಗಿರುವುದಾಗಿದೆ. ಸದ್ರಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

 

Leave a Reply

Your email address will not be published. Required fields are marked *