Crime Reported in Mangalore Rural Police Station

ದಿನಾಂಕ 22/04/2018 ರಂದು ಪಿರ್ಯಾದಿದಾರರಾದ ರಾಜೇಶ್ ಕುಮಾರ ರವರ ಪತ್ನಿಯು ಮದುವೆಗೆ ಹೋಗಿ ಸಂಜೆ 5-00 ಗಂಟೆಯ ಸುಮಾರಿಗೆ ಮನೆಗೆ ವಾಪಾಸು ಬಂದು ಆಕೆಯ ಚಿನ್ನಾಭರಣಗಳನ್ನು ಮನೆಯಲ್ಲಿ ಬಟ್ಟೆ-ಬರೆಗಳನ್ನು ಇಡುವ ಸ್ಥಳದಲ್ಲಿ ಪ್ಲಾಸ್ಟೀಕ್ ಕರಡಿಗೆಯಲ್ಲಿರಿಸಿ ಬಟ್ಟೆಗಳ ಮಧ್ಯ ಇಟ್ಟಿದ್ದು ದಿನಾಂಕ 27/04/2018 ರಂದು ಬೆಳಗ್ಗೆ ಬಟ್ಟೆ-ಬರೆಗಳನ್ನು ಜೋಡಿಸುವಾಗ ಚಿನ್ನಾಭರಣಗಳನ್ನು ಇಟ್ಟಿದ್ದ ಕರಡಿಗೆಯು ಪತ್ತೆಯಾಗದ್ದರಿಂದ ಮನೆಯ ಎಲ್ಲಾ ಕಡೆಯು ಹುಡುಕಾಡಿದರೂ ಚಿನ್ನಾಭರಣಗಳು ಪತ್ತೆಯಾಗಿರುವುದಿಲ್ಲ. ಕಳವಾಗಿರುವ ಚಿನ್ನಾಭರಣಗಳಾದ (1) ಹವಳದ ಚಿನ್ನದ ಸರ ಸುಮಾರು 3 ½ ಪವನ್, (2) ಮಗುವಿನ ಚಿಕ್ಕ ಉಂಗುರ – 1, ¼ ಪವನ್, (3) ದೊಡ್ಡ ಉಂಗುರಗಳು – 2, 1 ಪವನ್, (4) ಕಿವಿಯ ಚಿನ್ನದ ಬೆಂಡೋಲೆ ಮತ್ತು ಜುಮುಕಿ – 1ಜೊತೆ, 1 ½ ಪವನ್, (5) ಚಿನ್ನದ ಬಳೆಗಳು – 2, 2 ½ ಪವನ್. ಸದ್ರಿ ಕಳವಾದ ಚಿನ್ನಾಭರಣಗಳ ಮೌಲ್ಯ ಸುಮಾರು 1.75 ಲಕ್ಷ ಆಗಿದ್ದು ಕಳವಾದ ಚಿನ್ನಾಭರಣಗಳನ್ನು ಪತ್ತೆಮಾಡಿ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ನೀಡಿದ ಪಿರ್ಯಾದಿಯನ್ನು ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *