Crime Reported in Mangalore North PS

ದಿನಾಂಕ 7/8.01.2019 ರಂದು ರಾತ್ರಿ ಸಮಯದಲ್ಲಿ ಯಾರೋ ಕಳ್ಳರು ಮಂಗಳೂರು ನಗರದ ಮೈದಾನ ರಸ್ತೆಯ ಬಳಿಯಲ್ಲಿರುವ ಎಮ್ ಪಾಯಸ್ ವೈನ್ ಶಾಪಿನ ಬಳಿಯಲ್ಲಿರುವ ಪಿರ್ಯಾದಿ ARUN D KUNH ದಾರರ ಬಾಬ್ತು ಲಿಯೋ ಕಲೆಕ್ಷನ್ಸ್ ಎಂಬ ಅಂಗಡಿಗೆ ಹಿಂಬದಿಯಲ್ಲಿದ್ದ ಎಕ್ಸಾಸ್ಟ್ ಪ್ಯಾನನ್ನು ಕಳಚಿ ಅದರ ಕಿಂಡಿಯ ಮೂಲಕ ಒಳ ಪ್ರವೇಶಿಸಿ, ಅಂಗಡಿಯಲ್ಲಿದ್ದ ಎಲೆಕ್ಟ್ರಾನಿಕ್ ಐ ಕಂಪನಿಯ ಹಳೆಯದಾದ 16 ಚಾನಲ್ಲಿನ ಡಿವಿಆರ್-1 ಮತ್ತು 8 ಚಾನಲಿನ ಡಿವಿಆರ್ -1ನ್ನು ಹಾಗೂ ಸ್ವಲ್ಪ ನಗದು ಹಣವನ್ನು ಕಳವು ಮಾಡಿಕೊಂಡು ಹೋಗಿರುತ್ತಾರೆ, ಈ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕಾಗಿ ಪಿರ್ಯಾದಿದಾರರು ನೀಡಿದ ದೂರಿನ ಸಾರಾಂಶ ಎಂಬಿತ್ಯಾದಿಯಾಗಿರುತ್ತದೆ.

2) ಪಿರ್ಯಾದಿ SMT JYOTHI ದಾರರು ಇನ್ಯ್ಸೂರೆನ್ಸ್ ಕಂಪೆನಿಯಲ್ಲಿ ಕ್ಲರ್ಕ್ ಆಗಿ ಕೆಲಸ ಮಾಡಿಕೊಂಡಿದ್ದು, ದಿನಾಂಕ 08.01.2019 ರಂದು ಬೆಳಿಗ್ಗೆ ಎಂದನಂತೆ ಸರ್ವಿಸ್ ಬಸ್ಸಿನಲ್ಲಿ ಜ್ಯೋತಿಯಿಂದ ಕೊಡಿಯಾಲ ಬೈಲ್ ಗೆ ಬರುವ ಮದ್ಯೆ ಸಮಯ ಸುಮಾರು 09.00 ಗಂಟೆಗೆ ಫಿರ್ಯಾದಿದಾರರ ಬ್ಯಾಗ್ ನ ಝಿಪ್ ನ್ನು ಯಾರೋ ಕಳ್ಳರು ತೆರೆದು ಅದರಲ್ಲಿದ್ದ 2 ಎಟಿಎಂ ಕಾರ್ಡ್ ಗಳು ಹಾಗೂ ನಗದು ಹಣ ರೂ. 7500/- ನ್ನು ಕಳವು ಮಾಡಿರುವುದಲ್ಲದೆ, ಸದ್ರಿ ಎಟಿಎಂ ಕಾರ್ಡ್ ನ್ನು ಬಳಸಿ ಮಲ್ಲಿಕಟ್ಟೆಯಲ್ಲಿರುವ SBI ಎಟಿಎಂ ನಿಂದ ಒಟ್ಟು 25,000/- ಹಣವನ್ನು ಡ್ರಾ ಮಾಡಿ ಕಳವು ಮಾಡಿರುವುದಾಗಿದೆ. ಕಳವಾದ ಒಟ್ಟು ನಗದು ಮೊತ್ತ 32,500/- ರೂ ಆಗಿರುತ್ತದೆ ಎಂಬಿತ್ಯಾದಿ

Leave a Reply

Your email address will not be published. Required fields are marked *