Crime Reported in Mangalore North Police Station

ಪಿರ್ಯಾಧಿದಾರರಾದ ಪುನೀತ್ ರವರು ದಿನಾಂಕ 09-11-2017 ರಂದು ತನ್ನ KA-19–EU-3276 ನೇ ನಂಬ್ರದ ಹೊಂಡಾ ಅಕ್ಟೀವಾ ಸ್ಕೂಟರ್ ನಲ್ಲಿ ಟ್ರಿಪ್ ಶೀಟ್ ನ್ನು ಸಪ್ಲೈ ಮಾಡುವರೇ ಮನೆಯಿಂದ ಹೊರಟು ಕಾರ್ ಸ್ಟ್ರೀಟ್ ಗೆ ಬಂದು ಸಮಯ ಸುಮಾರು ಬೆ. 07-15 ಗಂಟೆಗೆ ಸದ್ರಿ ಸ್ಥಳದ ಶ್ರೀ ವೆಂಕಟೇಶ್ವರ ಕಂಪ್ಯೂಟರ್ ಕ್ಯಾಂಪ್ ಅಂಗಡಿಯ ನೇರ ಎದುರುಗಡೆ ರಸ್ತೆ ಬದಿಯಲ್ಲಿ ನಿಲ್ಲಿಸಿ ಸೈಟಿಗೆ ಹೋಗಿ ಕಿರಣ್ ರವರಿಗೆ ಟ್ರಿಪ್ ಶೀಟ್ ನ್ನು ಕೊಟ್ಟು ವಾಪಾಸು ಅರ್ಧ ಗಂಟೆಯಲ್ಲಿ ಅಂದರೆ ಬೆ.07-45 ಗಂಟೆಗೆ ಸ್ಕೂಟರ್ ಇಟ್ಟಲ್ಲಿಗೆ ಬಂದಾಗ ತನ್ನ KA-19–EU-3276 ನೇ ಹೊಂಡಾ ಅಕ್ಟೀವಾ ಸ್ಕೂಟರ್ ಇರಲಿಲ್ಲ. ಅಕ್ಕ ಪಕ್ಕದಲ್ಲಿ ಹುಡುಕಾಡಿ ಇತರರಲ್ಲಿ ವಿಚಾರಿಸಿದ್ದು, ತನ್ನ ತಮ್ಮನಿಗೆ ವಿಷಯ ತಿಳಿಸಿದ್ದು, ಸ್ಕೂಟರ್ ಸಿಗಬಹುದೆಂಬ ನಿರೀಕ್ಷೆಯಿಂದ ಮಂಗಳೂರು ನಗರದ ಎಲ್ಲಾ ಕಡೆಗಳಲ್ಲಿ ಈ ದಿನದವರೇಗೆ ಇಬ್ಬರೂ ಹುಡುಕಾಡಿದಲ್ಲಿ ಎಲ್ಲಿಯೂ ಪತ್ತೆಯಾಗದಿದ್ದು, ಸದ್ರಿ ಸ್ಕೂಟರನ್ನು ಇಟ್ಟಿದ್ದ ಸ್ಥಳದಿಂದ ಯಾರೋ ಕಳ್ಳರು ಕಳವು ಮಾಡಿಕೊಂಡು ಹೋಗಿರುತ್ತಾರೆ ಸದ್ರಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *