Crime Reported in Mangalore East Police Station

ದಿನಾಂಕ:28-10-2017 ರಂದು ಪ್ರಕರಣದ ಮಂಗಳೂರು ಪೂರ್ವ ಪೊಲೀಸ್ ಠಾಣೆಯ ಪೊಲೀಸ್ ಉಪ ನಿರೀಕ್ಷಕರು ಠಾಣಾ ವ್ಯಾಪ್ತಿಯಲ್ಲಿ ರೌಂಡ್ಸ್ ಕರ್ತವ್ಯದಲ್ಲಿರುವ ಸಮಯ ಯುವಕನೊರ್ವ ಬಲ್ಮಠ ಶಾಂತಿನಿಲಯ ಬಳಿ ಎದುರು ಸಾರ್ವಜನಿಕ ಸ್ಥಳದಲ್ಲಿ ಸಿಗರೇಟ್ ಸೇದುತ್ತಿದ್ದುದನ್ನು ಕಂಡು ಆತನ ಬಳಿ ಹೋಗುತಿದ್ದಾಗ ಆತನು ನಮ್ಮನ್ನು ಕಂಡು ಸಿಗರೇಟನ್ನು ದೂರ ಬಿಸಾಡಿದ್ದು, ಆತನನ್ನು ವಿಚಾರಿಸಲಾಗಿ ಆತನ ಮಾತು ತೊದಲುತ್ತಿದ್ದು, ಬಾಯಿಯಿಂದ ಗಾಂಜಾ ಸೇದಿದ ವಾಸನೆ ಬರುತ್ತಿದ್ದರಿಂದ, ಆತನನ್ನು ಕೂಲಂಕುಷವಾಗಿ ವಿಚಾರಸಿದ್ದಲ್ಲಿ ಆತನು ಸಿಗರೇಟಿನ ಜೊತೆ ಗಾಂಜಾ ಸೇರಿಸಿ  ಸೇದಿದ ಬಗ್ಗೆ ತನ್ನ ತಪ್ಪನ್ನು ಒಪ್ಪಿಕೊಂಡ ಮೇರೆಗೆ ಆತನನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಿಕೊಟ್ಟಲ್ಲಿ ಆತನು ಗಾಂಜಾ ಸೇವನೆ ಮಾಡಿರುವ ಬಗ್ಗೆ ವ್ಯೆದಕೀಯ ಪರೀಕ್ಷೆಯಿಂದ ದ್ರಡಪಟ್ಟಿರುವುದರಿಂದ ಈತನ ವಿರುದ್ದ ಮಾದಕ ದ್ರವ್ಯ ಕಾಯ್ದೆ ಅಡಿ ಕಾನೂನು ಕ್ರಮ ಕೈಗೊಂಡಿರುವುದಾಗಿದೆ.

Leave a Reply

Your email address will not be published. Required fields are marked *