Crime Reported in E and N Crime PS

ದಿನಾಂಕ: 10-01-2019 ರಂದು ಬೆಳಿಗ್ಗೆ 10.00 ಗಂಟೆಗೆ ಇಕೊನಾಮಿಕ್ & ನಾರ್ಕೋಟಿಕ್ಸ್ ಕ್ರೈಂ ಪೊಲೀಸ್ ಠಾಣಾ ಸಹಾಯಕ ಪೊಲೀಸ್ ಉಪ ನಿರೀಕ್ಷಕ ಶ್ಯಾಮ್ ಸುಂದರ್ ರೌಂಡ್ಸ್ ಕರ್ತವ್ಯದಲ್ಲಿ ಇರುವಾಗ್ಯೆ ಮಂಗಳೂರು ನಗರದ ಬೆಂದೂರ್ ವೆಲ್ ಜಂಕ್ಷನ್ ಬಳಿಯ ಹೋಟೇಲ್ ಸುಮನ್ ರೆಸಿಡೆನ್ಸಿ ಲೋಡ್ಜಿಂಗ್ ಮತ್ತು ಬೋರ್ಡಿಂಗ್ ಕಟ್ಟಡದ ಹೆಚ್.ಡಿ.ಎಪ್.ಸಿ. ಬ್ಯಾಂಕ್ ಎದುರುಗಡೆ ಸಾರ್ವಜನಿಕ ಸ್ಥಳದಲ್ಲಿ ಕಪ್ಪು ಬಣ್ಣದ ಪ್ಯಾಂಟ್ ಮತ್ತು ಕಪ್ಪು ಬಣ್ಣದ ಟೀ ಶರ್ಟ್ ಧರಿಸಿ ಓರ್ವ ವ್ಯಕ್ತಿಯು ಯಾವುದೇ ಪರವಾನಿಗೆ ಇಲ್ಲದೇ ಅಕ್ರಮವಾಗಿ ಗಾಂಜಾವನ್ನು ಮಾರಾಟ ಮಾಡುವರೇ ಕೈಯಲ್ಲಿ ಸಣ್ಣ ಬಟ್ಟೆ ಚೀಲದಲ್ಲಿ ಗಾಂಜಾವನ್ನು ತುಂಬಿಸಿ ಹಿಡಿದು ನಿಂತಿರುವುದಾಗಿಯೂ ಅಲ್ಲದೇ ಸದ್ರಿ ವ್ಯಕ್ತಿಯು ಅಮಲು ಪದಾರ್ಥವನ್ನು ಸೇವಿಸಿ ನಶೆಯಲ್ಲಿದ್ದಂತೆ ಕಂಡು ಬಂದಿರುವುದಾಗಿ ಬಾತ್ಮೀದಾರರಿಂದ ಬಂದ ಮಾಹಿತಿಯಂತೆ ಬೆಂದೂರ್ ವೆಲ್ ಜಂಕ್ಷನ್ ಬಳಿಯ ಹೋಟೇಲ್ ಸುಮನ್ ರೆಸಿಡೆನ್ಸಿ ಲೋಡ್ಜಿಂಗ್ ಮತ್ತು ಬೋರ್ಡಿಂಗ್ ಕಟ್ಟಡದ ಎದುರು ದಾಳಿ ನಡೆಸಿ ಗಾಂಜಾ ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದವನನ್ನು ವಶಕ್ಕೆ ಪಡೆದು ಆತನ ಕೈಯಲ್ಲಿ ಬಟ್ಟೆ ಚೀಲದಲ್ಲಿದ್ದ ರೂ. 10,080/- ಬೆಲೆಯ 280 ಗ್ರಾಂ ಗಾಂಜಾ ಮತ್ತು ರೂ. 15,000/- ಮೌಲ್ಯದ ಸ್ಯಾಮ್ ಸಂಗ್ ಕಂಪೆನಿಯ ಮೊಬೈಲ್ ಪೋನನ್ನು ಸ್ವಾಧೀನ ಪಡಿಸಿ ಕೆ.ಎಸ್.ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಇಲ್ಲಿನ ವೈದ್ಯಾಧಿಕಾರಿಯವರಲ್ಲಿ ತಪಾಸಣೆ ನಡೆಸಿ ಆರೋಪಿತನ ವಿರುದ್ದ ಕ್ರಮ ಕೈಗೊಂಡಿರುವುದಾಗಿದೆ

Leave a Reply

Your email address will not be published. Required fields are marked *