Crime Reported in Bajpe PS

ದಿನಾಂಕ:07-11-2018 ರಂದು ಪ್ರಕರಣದ ಫಿರ್ಯಾದಿದಾರರಾದ ಶ್ರೀ ಡಾನ್ ಅಬ್ರಾಹಂ ಎಂಬುವರು ತನ್ನ ಕಾರಿನಲ್ಲಿ ಪ್ರಯಾಣಿಕರನ್ನು ಮಧ್ಯಾಹ್ನ 12-10 ಗಂಟೆಗೆ airport ಇಳಿಸಿ ಪಾರ್ಕಿಂಗ್ ನಲ್ಲಿ ನಿಲ್ಲಿಸಿದ್ದ ಸಮಯ ಅತಾವುಲ್ಲಾ,ಹುಸ್ಮಾನ್ ಮತ್ತು ಇತರೆ 10-20 ಜನರು ಬಂದು ಅವಾಚ್ಯ ಶಬ್ದಗಳಿಂದ ಬೈದು ಇಲ್ಲಿ ನಿಲ್ಲಿಸಿದ್ದು ಏಕೆ?ಮರ್ಯದೆಯಿಂದ ನಡಿ ಇಲ್ಲದಿದ್ದರೆ ಕೊಂದು ಬಿಡುತ್ತೇವೆ ಎಂದು ಹೇಳಿ ಜೀವ ಬಿದರಿಕೆ ಉಂಟು ಮಾಡಿದ್ದು ಬಳಿಕ ತನ್ನ ಪರಿಚಯದ ಮಾಮುಲಿ ಕಸ್ಟಮರ್ ಆಗಿರುವ ಒಬ್ಬರು ವ್ಯಕ್ತಿಯನ್ನು ಕರೆ ತರಲು ಏರ್ ಪೋರ್ಟಗೆ ಮಧ್ಯಾಹ್ನ 01-15 ಗಂಟೆಗೆ ಬಂದಾಗ ಪುನಃ ಮೇಲ್ಕಂಡವರುಗಳು ಬಂದು ಗಲಾಟೆ ಮಾಡಿ ಬೆದರಿಕೆ ಒಡ್ಡಿದ್ದು, ಈ ವಿಚಾರವನ್ನು ತಿಳಿಸಲು ದಕ್ಷಿಣ ಕನ್ನಡ ಆನ್ ಲೈನ್ ಟ್ಯಾಕ್ಸಿ ಮಾಲಿಕರು ಮತ್ತು ಚಾಲಕರ ಅಸೋಶಿಯೇಷನ್ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಹಾಗೂ ಇತರರು ಮತ್ತು ಫಿರ್ಯಾದಿದಾರರು ಏರ್ ಪೋರ್ಟ ಆಥಾರಿಟಿಯ ಕಛೇರಿಗೆ ಸುಮಾರು 03-00 ಗಂಟೆಗೆ ಹೋಗುವಾಗ ಟ್ಯಾಕ್ಸಿ ಪಾರ್ಕಿಂಗ್ ಸ್ಥಳದಲ್ಲಿ ಪದಾಧಿಕಾರಿಗಳಾದ ಖಾದರ್,ಅತಾವುಲ್ಲಾ,ಉಸ್ಮಾನ್ ,ಸಿನಾನ್ ,ಭೋಜ,ಬಾಲಕೃಷ್ಣ,ಫಾರೂಕ್ ,ಮತ್ತು ಇತರೆ ಸುಮಾರು 100 ಜನರು ಸೇರಿ ಮಾರಕ ಆಯುಧವನ್ನು ಹಿಡಿದುಕೊಂಡು ಬಂದು ಅವಾಚ್ಯವಾಗಿ ನಿಮ್ಮನ್ನು ಬಿಡುವುದಿಲ್ಲ ಕೊಂದು ಬಿಡುತ್ತೇವೆ ಎಂದು ಬೆದರಿಕೆ ಒಡ್ಡಿ ಅವರುಗಳ ಪೈಕಿ ಅತಾವುಲ್ಲಾ ಎಂಬುವರು ಫಿರ್ಯಾದಿದಾರರ ತಲೆಗೆ ಕಬ್ಬಿಣದ ರಾಡಿನಿಂದಲೂ ಭೋಜ ಮತ್ತು ಸಿನಾನ್ ರವರು ಕೈಗೆ ಕಾಲಿಗೆ ಬೆನ್ನಿಗೆ ಮರದ ಸೊಂಟೆಯಿಂದ ಹೊಡೆದುದಲ್ಲದೇ,ಕೆಳಗೆ ಬಿದ್ದಾಗ ಕೆಲವರು ಕಾಲಿನಿಂದ ತುಳಿದಿರುತ್ತಾರೆ.ಅಲ್ಲದೇ ಫಿರ್ಯಾದಿಯ ಜೊತೆ ಇದ್ದ ಅಲ್ತಾಫ್,ಮನ್ಸೂರ್ ಮತ್ತು ಇತರರಿಗೂ ಹಲ್ಲೆ ಮಾಡಿದ್ದಲ್ಲಧೇ ಫಿರ್ಯಾದಿದಾರರ ಕಾರನ್ನು ಹುಡಿ ಮಾಡಿ ನಷ್ಠವನ್ನು ಉಂಟುಮಾಡಿರುವುದಾಗಿದೆ ಎಂಬಿತ್ಯಾದಿ.

2) ಫಿರ್ಯಾದಿ MOHAMMAD SINAAN ದಾರರು ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಟ್ಯಾಕ್ಷಿ ಅಸೋಸಿಯೇಷನ್ ನ ಸದಸ್ಯರಾಗಿದ್ದು, ಟ್ಯಾಕ್ಷಿ ಅಸೋಸಿ ಯೇಶನ್ ನವರು ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಶುಲ್ಕ ಪಾವತಿಸಿ ಟ್ಯಾಕ್ಸಿಗಳನ್ನು ಚಲಾಯಿಸುತ್ತಿದ್ದು, ಇತ್ತೀಚೆಗೆ ವೋಲೋ ಕಂಪೆನಿಯ ಟ್ಯಾಕ್ಷಿ ಚಾಲಕರು ಯಾವುದೇ ಶುಲ್ಕವನ್ನು ಪಾವತಿ ಮಾಡದೇ ವಿಮಾನ ನಿಲ್ದಾಣಕ್ಕೆ ಬಂದು ಪ್ರಯಾಣಿಕರನ್ನು ಕರೆದುಕೊಂಡು ಹೋಗುತ್ತಿದ್ದುದರಿಂದ ಅದಕ್ಕೆ ಟ್ಯಾಕ್ಷಿ ಅಸೋಸಿಯೇಷನ್ ಆಕ್ಷೇಪ ವ್ಯಕ್ತಪಡಿಸಿ ವಿಮಾನ ನಿಲ್ದಾಣ ಪ್ರಾಧಿಕಾರಕ್ಕೆ ಕೋರಿಕೆ ಪತ್ರ ನೀಡಿದ ಕೋಪದಲ್ಲಿ ದಿನಾಂಕ: 07-11-2018 ರಂದು 15-00 ಗಂಟೆಗೆ, ಮಂಗಳೂರು ತಾಲೂಕು, ಕೆಂಜಾರು ಗ್ರಾಮದ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಪಾರ್ಕಿಂಗ್ ಏರಿಯಾದಲ್ಲಿ ಇತರ ಚಾಲಕರೊಂದಿಗೆ ಫಿರ್ಯಾದಿದಾರರು ಕುಳಿತ್ತಿದ್ದ ಸಮಯ ಅಲ್ಲಿಗೆ ಇಮ್ತಿಯಾಜ್ ಎಂಬಾತನ ನೇತೃತ್ವದಲ್ಲಿ ಡಾನ್ ಅಬ್ರಹಾಂ, ಮುನಾವರ್, ಹಕೀಂ, ವಾಸಿಂ ಎಂಬವರೊಂದಿಗೆ ಕೆಎ 21 ಬಿ 6108 , ಕೆಎ 19 ಎಸಿ 5166 , ಕೆಎ 19 ಎಸಿ 3536, ಕೆಎ 19 ಎಸಿ 4980, ಕೆಎ 19 ಎಸಿ, 4138 ನಂಬ್ರದ ಮತ್ತು ಇತರ ಕಾರುಗಳಲ್ಲಿ ಬಂದ 50 ರಿಂದ 60 ಜನರು ಕಾರಿನಿಂದ ಮರದ ದೊಣ್ಣೆ, ಚೂರಿ, ಸ್ಕ್ರೂ ಡ್ರೈವರ್, ಇತ್ಯಾದಿಗಳನ್ನು ಹಿಡಿದುಕೊಂಡು ಕೆಳಗಿಳಿದು ಬಂದು ಏಕಾಏಕಿಯಾಗಿ ಫಿರ್ಯಾದಿದಾರರನ್ನು ಮತ್ತು ಇತರರನ್ನು ಉದ್ದೇಶಿಸಿ, ಅವಾಚ್ಯ ಶಬ್ದಗಳಿಂದ ಬೈದು , ಓಲಾ ದವರನ್ನು ಏರ್ ಪೋರ್ಟ್ ಗೆ ಬರದಂತೆ ತಡೆಯಲು ನೀವು ಯಾರು? ಎಂದು ಅವಾಚ್ಯವಾಗಿ ಬೈದು, ಸಿಕ್ಕ ಸಿಕ್ಕವರಿಗೆ ದೊಣ್ಣೆಗಳಿಂದ ಹೊಡೆದು, ಸ್ಕ್ರೂ ಡ್ರೈವರ್ ಇತ್ಯಾದಿಗಳಿಂದ ತಿವಿದು ಗಾಯಗೊಳಿಸಿ ಫಿರ್ಯಾದಿದಾರರು ಮತ್ತು ಇತರರನ್ನು ನೋಡಿ, ಈ ದಿನ ಬದುಕಿದಿರಿ ಇನ್ನೊಂದು ದಿನ ನಿಮ್ಮ ಹೆಣ ಉರುಳುವುದು ಖಂಡಿತ ಎಂದು ಜೀವ ಭಯದ ಬೆದರಿಕೆಯನ್ನೊಡ್ಡಿದ್ದು, ಆರೋಪಿತರ ಹಲ್ಲೆಯಿಂದ ಗಾಯಗೊಂಡ ಫಿರ್ಯಾದಿದಾರರು , ಅಬ್ದುಲ್ ರಹಿಮಾನ ಮತ್ತು ಅತಾವುಲ್ಲಾ ಎಂಬವರು ಮಂಗಳೂರು ವೆನ್ಲಾಕ್ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂಬಿತ್ಯಾದಿ.

Leave a Reply

Your email address will not be published. Required fields are marked *