Crime Reported in Bajpe Police Station

ದಿನಾಂಕ-10/04/2019 ರಂದು ಪಿರ್ಯಾದಿ ತನ್ನ ಸಂಬಂದಿಕರೊಂದಿಗೆ ಕೋಣಾಜೆಗೆ ಮದುವೆ ಕಾರ್ಯಕ್ರಮಕ್ಕೆ ಹೋದವರು ಮರಳಿ ತನ್ನ ಬಾಬ್ತು ಖಾಸಗಿ ಆಟೋ ರಿಕ್ಷಾ KA-19 C-5617 ರಲ್ಲಿ ರಿಕ್ಷಾವನ್ನು ಚಲಾಯಿಸುತ್ತ ಮಂಗಳೂರು ತಾಲೂಕು ಮೂಳೂರು ಗ್ರಾಮದ ಗುರುಪುರ ಬಳಿ ಸಂಜೆ 04-45 ಗಂಟೆಯ ಸಮಯಕ್ಕೆ ಕೈಕಂಬ ಕಡೆಗೆ ಬರುತ್ತಿದ್ದಂತೆ ಎದುರಿನಿಂದ ಅಂದರೆ ಕೈಕಂಬ ಕಡೆಯಿಂದ ಮಂಗಳೂರು ಕಡೆಗೆ ಬರುತ್ತಿದ್ದ ಆಟೋ ರಿಕ್ಷಾ KA-19 D-7239 ನ್ನು ಅದರ ಚಾಲಕ ನರಸಿಂಹ ತಿರುವುನಲ್ಲಿ ಅತೀ ವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಪಿರ್ಯಾದಿಯ ರಿಕ್ಷಾಕ್ಕೆ  ಡಿಕ್ಕಿ ಉಂಟು ಮಾಡಿದ ಪರಿಣಾಮ ಪಿರ್ಯಾದಿಗೆ ಮತ್ತು ರಿಕ್ಷಾ ಚಾಲಕನ ಹಿಂಬದಿ ಕುಳಿತ್ತಿದ್ದ ಪಿರ್ಯಾದಿಯ ಪತ್ನಿ ಮೀನಾಕ್ಷಿ ಗೌಡ ಮತ್ತು ಸಂಬಂದಿ ಮೀನಾ ಗೌಡ ಎಂಬುವರಿಗೆ ಸಾಮಾನ್ಯ ಸ್ವರೂಪದ ಗಾಯಗಳುಂಟಾಗಿ ಎ.ಜೆ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಅಪಘಾತಗೊಳಿಸಿದ ರಿಕ್ಷಾ ಚಾಲಕನ ವಿರುದ್ದ ಕಾನೂನು ಕ್ರಮಕ್ಕಾಗಿ ಪಿರ್ಯಾದಿ ನೀಡಿರುವುದಾಗಿದೆ

Leave a Reply

Your email address will not be published. Required fields are marked *