Crime Reported in Bajpe Police Station

ದಿನಾಂಕ-10/08/2018 ರಂದು ಪಿರ್ಯಾದಿದಾರರಾದ ಶ್ರೀಮತಿ ಲಲಿತಾ ಎಂಬುವರು ಕೈಕಂಬ ಪೇಟೆಯಲ್ಲಿರುವ ಅಂಚೆ ಕಚೇರಿಯಿಂದ ಆಧಾರ ಕಾರ್ಡನ ಬಾಬ್ತು ಕೆಲಸಕ್ಕೆ ಬಂದವರು ಅಲ್ಲಿಂದ ಬೆಳಿಗ್ಗೆ ಸುಮಾರು 11-25 ಗಂಟೆಗೆ ಕೆಲಸ ಮುಗಿಸಿಕೊಂಡು ಅಲ್ಲಿಂದ ಹೊರಟು ಮಂಗಳೂರು ತಾಲೂಕು ಕಂದಾವರ ಗ್ರಾಮದ ಕೈಕಂಬ ಪೇಟೆಯಲ್ಲಿ ಕಚ್ಚಾ ರಸ್ತೆಯಲ್ಲಿ ತೀರಾ ಎಡಬದಿಯಲ್ಲಿ ಪಾದಚಾರಿಯಾಗಿ ನಡೆದುಕೊಂಡು ಹೋಗುತ್ತಿರುವಾಗ ಮಂಗಳೂರು ಕಡೆಯಿಂದ ಮೂಡಬಿದ್ರೆ ಕಡೆಗೆ ಮೋಟಾರು ಸೈಕಲ್ ನಂಬ್ರ KA-09 HS-0473 ನೇದನ್ನು ಅದರ ಸವಾರ, ಸಹ ಸವಾರರೊಂದಿಗೆ ಅತೀವೇಗ ಮತ್ತು ಅಜಾಗರೂಕತೆಯಿಂದ ಚಲಾಯಿಸಿಕೊಂಡು ಹೋಗುತ್ತಾ ಪಿರ್ಯಾದಿ ಶ್ರೀಮತಿ ಲಲಿತಾ ಎಂಬುವರಿಗೆ ಹಿಂದಿನಿಂದ ಡಿಕ್ಕಿ ಹೊಡೆದು ಮೋಟಾರು ಸೈಕಲ್ ಸಮೇತ ಸವಾರ ಮತ್ತು ಸಹ ಸವಾರ ಬಿದ್ದರು ಅಪಘಾತದಿಂದ ಪಿರ್ಯಾದಿ ಲಲಿತಾಎಂಬುವರ ತಲೆಗೆ, ಹಣೆಗೆ,ಎಡಕೈ ಭುಜಕ್ಕೆ, ಮೂಗಿಗೆ ರಕ್ತ ಗಾಯವಾಗಿದ್ದು ಹಾಗೂ ಎದೆಯ ಬಳಿ ಎಡ ಪಕ್ಕೆಲುಬುವಿಗೆ ಗಾಯವುಂಟಾಗಿದ್ದು ಚಿಕಿತ್ಸೆಯ ಬಗ್ಗೆ ದಿನಾಂಕ-10/08/2018 ರಂದು ಮಂಗಳೂರು ಕಂಕನಾಡಿ ಫಾದರ್ ಮುಲ್ಲರ್ಸ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿರುತ್ತಾರೆ. ಸದ್ರಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *