Crime Reported in Bajpe Police Station

ದಿನಾಂಕ 11-10-2017 ರಂದು ಪಿರ್ಯಾದಿದಾರರಾದ ಮೊಹಮ್ಮದ್ ಅವರ ಸಂಬಂಧಿ ಶಹೀಮ್ರವರೊಂದಿಗೆ ಅವರ ಬಾಬ್ತು ಕೆಎ-19-ಎಮ್‌ಜಿ-6245 ನೇ ಮಾರುತಿ ಓಮ್ನಿ ಕಾರಿನಲ್ಲಿ ಸೂರಲ್ಪಾಡಿಗೆತೆರಳಿ ಅಲ್ಲಿ ಶರೀಫ್ ರವರಿಗೆ ಹಣ ನೀಡಿ ಸೂರಲ್ಪಾಡಿಯಿಂದ ವಾಪಾಸು ಬಜಪೆ ಕಡೆಗೆ ಮಾರುತಿ ಓಮ್ನಿಕಾರಿನಲ್ಲಿ ಬರುತ್ತಾ ಶಹೀಮ್ ರವರು ಕಾರನ್ನು ಅತೀವೇಗವಾಗಿ ಚಲಾಯಿಸಿಕೊಂಡು ಬರುತ್ತಾಮಂಗಳೂರು ತಾಲೂಕು ಪಡುಪೆರಾರ ಗ್ರಾಮದ ಕಜೆ ಪದವು ಎಂಬಲ್ಲಿ ತಲುಪುವಾಗ ರಸ್ತೆಯಲ್ಲಿನಾಯಿಯೊಂದು ಅಡ್ಡವಾಗಿ ಬಂದ ಪರಿಣಾಮ ಶಹೀಮ್ ರವರು ಕಾರನ್ನು ಒಮ್ಮೆಲೇ ಎಡಕ್ಕೆ ತಿರುಗಿಸಿದಪರಿಣಾಮ ಕಾರು ಚಾಲನಾ ಹತೋಟಿ ತಪ್ಪಿ ಎಡಮಗ್ಗುಲಾಗಿ ರಸ್ತೆಗೆ ಮಗುಚಿ ಬಿದ್ದು, ಕಾರಿನಲ್ಲಿದ್ದಪಿರ್ಯಾದಿದಾರರಿಗೆ ಕೈಗೆ ತರಚಿದ ಹಾಗೂ ಶಹೀಮ್ ರವರಿಗೆ ಎರಡೂ ಕೈಗಳಿಗೆ ರಕ್ತಗಾಯ ಹಾಗೂ ಬಲಕೈಗೆ ಗುದ್ದಿದ ಗಾಯಗಳಾಗಿದ್ದು, ಶಹೀಮ್ ರವರು ಜಯಶ್ರೀ ನರ್ಸಿಂಗ್ ಹೋಮ್ ನಲ್ಲಿಚಿಕಿತ್ಸೆಯಲ್ಲಿರುವುದಾಗಿದೆ. ಸದ್ರಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *