Crime Reported in Bajpe Police Station

ದಿನಾಂಕ:12-08-2017 ರಂದು ಕೊಂಡೆಮೂಲ ಗ್ರಾಮದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪೂಜೆ ಮುಗಿಸಿ  ವಾಪಸ್ಸು ಕಿನ್ನಿಗೋಳಿ ಕಡೆಗೆ ಹೋಗುವರೇ ಪಿರ್ಯಾದಿದಾರರು ತಂದೆಯು ಚಲಾಯಿಸುತ್ತಿದ್ದ KA-28 P-3829 ನೇ ಕಾರಿನಲ್ಲಿ  ತಾಯಿ ಹಾಗೂ ಅಕ್ಕನ ಜೊತೆ ಹೋಗುತ್ತಿರುವಾಗ ಬೆಳಿಗ್ಗೆ 9-00 ಗಂಟೆಗೆ ಕಾರು ಕಟೀಲು ಬಸ್ಸು ನಿಲ್ದಾಣದಿಂದ ಕಟೀಲು ಸೌಂದರ್ಯ ಹೊಟೇಲ್ ಬಳಿ ತಲುಪುತ್ತಿದ್ದಂತೆ ಎದುರಿನಿಂದ ಅಂದರೆ ಕಿನ್ನಿಗೋಳಿ ಕಡೆಯಿಂದ ಕಟೀಲು ಕಡೆಗೆ KA-19 B-8556  ನೇ ಟಿಪ್ಪರ ಚಾಲಕನು ಅತೀ ವೇಗ ಮತ್ತು ನಿರ್ಲಕ್ಷತನದಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು  ಕಾರಿಗೆ ಡಿಕ್ಕಿ ಹೊಡೆದುದ್ದಲ್ಲದೇ ಹಾಗೂ ರಸ್ತೆಯ ಬದಿಗೆ ಇದ್ದ ವಿದ್ಯುತ ಕಂಬಕ್ಕೆ ಡಿಕ್ಕಿ  ಹೊಡೆದಿದ್ದು, ಕಾರು ಚಲಾಯಿಸುತ್ತಿದ್ದ ಪಿರ್ಯಾದಿದಾರರ ತಂದೆಯ ಹಣೆಗೆ ಹಾಗೂ ಇತರ ಕಡೆಗೆ ಗಾಯವಾಗಿದ್ದು ಮತ್ತು ಪಿರ್ಯಾದುದಾರರ ತಾಯಿಗೆ ಎಡಗೈ ಮೂಳೆ ಮುರಿತವಾಗಿರುತ್ತದೆ ಅವರುಗಳನ್ನು ಚಿಕಿತ್ಸೆಯ ಬಗ್ಗೆ ಎ.ಜೆ.ಆಸ್ಪತ್ರೆಗೆ ದಾಖಲಿಸಿದ್ದು,ಸದ್ರಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

Leave a Reply

Your email address will not be published. Required fields are marked *